ದಿನದ ಸುದ್ದಿ
ವಿಡಿಯೋ | ಅಭಿಮಾನಿಗಳ ಪ್ರೀತಿ ಮುಂದೆ ಯಾವುದೂ ಸರಿ ಸಾಟಿ ಇಲ್ಲ : ಶಿವರಾಜ್ ಕುಮಾರ್
ಸುದ್ದಿದಿನ, ಬೆಂಗಳೂರು : ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ. ಮೊದಲು ಅಭಿಮಾನಿಗಳು ಮನೆ ಹತ್ತಿರ ಬರುತ್ತಿದ್ದರು, ಈಗ ಸ್ಮಾರಕದ ಬಳಿ ಬಂದು ಆಚರಿಸ್ತಾರೆ. ಸ್ಮಾರಕ ಅನ್ನೋದು ಮುಖ್ಯವಲ್ಲ. ಅಭಿಮಾನಿಗಳ ಪ್ರೀತಿಗೆ ಯಾವುದು ಸರಿ ಸಾಟಿ ಇಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದರು.
ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪಾಜಿ ಯಾವುದಕ್ಕೂ ಅಪೇಕ್ಷೆ ಪಟ್ಟವರಲ್ಲ. ರಾಜ್,ಅಂಬಿ ಹಾಗೂ ವಿಷ್ಣು ಭಾಂದವ್ಯ ಬೇರೆಯದೇ ರೀತಿಯಲ್ಲಿತ್ತು. ಒಬ್ಬರಿಗೊಬ್ಬರು ತಮಾಷೆಯಾಗಿ ಕಾಲೆಳೀತಿದ್ರು. ಇಂದು ಅಂಬರೀಷ್ 5ನೇ ತಿಂಗಳ ಪುಣ್ಯತಿಥಿ ಅಂತ ಗೊತ್ತಿರಲಿಲ್ಲ. ಸುಮಲತಾ ಬಂದು ರಾಜ್ ಸಮಾಧಿಗೆ ದರ್ಶನ ಪಡೆದಿದ್ದು ಸಂತೋಷವಾಯ್ತು ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243