ದಿನದ ಸುದ್ದಿ

ಲೇಬರ್ ಕಾಲೋನಿ ಶ್ರೀ ಕರಿಬಸಜಯ್ಯ ದೇವಸ್ಥಾನದಲ್ಲಿ 57 ನೇ ವರ್ಷದ ಶಿವರಾತ್ರಿ ಜಾಗರಣ ಮಹೋತ್ಸವ

Published

on

ಸುದ್ದಿದಿನ,ದಾವಣಗೆರೆ:ಮಹಾಶಿವರಾತ್ರಿ ಹಬ್ಬ ಮತ್ತು ಜಾಗರಣೆ ಪ್ರಯಕ್ತ ದಾವಣಗೆರೆ ಲೇಬರ್ ಕಾಲೋನಿಯಲ್ಲಿ ನೋತನವಾಗಿ ನಿರ್ಮಿಸಿರುವ ಶ್ರೀ ಕರಿಬಸವೇಶ್ವರ ದೇವಸ್ಥಾನದಲ್ಲಿ 57 ನೇ ವರ್ಷದ ಶಿವರಾತ್ರಿ ಹಬ್ಬದ ವಿಶೇಷ ಪೊಜಾ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.

ದಿನಾಂಕ 28 ಶುಕ್ರವಾರ ಬೆಳಿಗ್ಗೆ ಮಹಾ ರುದ್ರಾಭಿಷೇಕ ಮತ್ತು ಮಹಾ ಮಂಗಳಾರತಿ, ಸಂಜೆ 7 ಗಂಟೆಗೆ ಭಜನಾ ಮಂಡಳಿಯಿಂದ ಭಜನೆಯೋದಿಗೆ ಜಾಗರಣೆ ಕಾರ್ಯಕ್ರಮ.

ದಿನಾಂಕ ಮಾರ್ಚ 1 ಶನಿವಾರದಂದು ಬೆಳಿಗ್ಗೆ 8 ಗಂಟೆಗೆ ರುದ್ರಾಭಿಷೇಕ, ಮಹಾ ಪೊಜೆ ನಂತರ ವಾದ್ಯ ವೈಭವಗಳೊಂದಿಗೆ ಸ್ವಾಮಿಯ ಉತ್ಸವ ಮೆರವಣಿಗೆ ನಂತರ ಮಧ್ಯಾಹ್ನ 12.30 ಗಂಟೆಗೆ ಅನ್ನ ಸಂತರ್ಪಣೆ ಪ್ರಸಾದ ಎರ್ಪಡಿಸಲಾಗಿದೆ.

ದಿನಾಂಕ 2 ರಂದು ಭಾನುವಾರ ಬಳಿಗ್ಗೆ 8 ಗಂಟೆಗೆ ವಿಶೇಷ ಪೊಜೆಯ ನಂತರ ಪಳಾರ ಹಾಕಿಸುವುದು.ದಿನಂಕ 4 ಮಂಗಳವಾರದಂದು ಸಂಜೆ 6.30ಕ್ಕೆ ಪಳಾರ ಹಂಚುವುದು.

ಈ ಎಲ್ಲಾ ದಿನಗಳಲ್ಲೊ ದೇವರಿಗೆ ವಿಶೇಷ ಪೊಜೆ ಮತ್ತು ಅಲಂಕಾರ ನೆಡೆಯುವುದು.ಮಹಾಶಿವರಾತ್ರಿ ನಿಮಿತ್ತ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ತನು ಮನ ಧನದೊಂದಿಗೆ ಸಹಕರಿಸಿ ಶ್ರೀ ಅಜ್ಜಯ್ಯನ ಕೃಪೆಗೆ ಪಾತ್ರರಾಗಲು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ನಗರಸೇವಕ ಜೆ.ಎನ್ ಶ್ರೀನಿವಾಸ್ ಮತ್ತು ಕಾರ್ಯದರ್ಶಿ ಪಿಎನ್ ಲೋಕೇಶಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version