ದಿನದ ಸುದ್ದಿ
ಅಪಘಾತ | ಶಿವಾತ್ಮನಂದ ಸರಸ್ವತಿ ಶ್ರೀಗಳು ವಿಧಿವಶ
ಸುದ್ದಿದಿನ,ಚಿಕ್ಕಬಳ್ಳಾಪುರ: ಶಿವಾತ್ಮನಂದ ಸರಸ್ವತಿ ಶ್ರೀಗಳು ಅಪಘಾತಕ್ಕೀಡಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿಧನರಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಬಳಿಯ ಜ್ಞಾನಾನಂದ ಆಶ್ರಮದ ಶ್ರೀಗಳು ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಶ್ರೀಗಳು ವೇದ ಭಗವಾನ್ ಎಂಬ ಪುಸ್ತಕ ಬರೆದಿದ್ದ ಇವರು, ಈ ಪುಸ್ತಕದ ಪ್ರಿಂಟಿಂಗ್ ಮಾಡಿಸಲು ಕಳೆದ ಸೋಮವಾರ ಗೋಪಾಲ್ ಚಾರ್ ಎಂಬ ಮಠದ ಭಕ್ತರ ಬೈಕಿನಲ್ಲಿ ತೆರಳುತ್ತಿದ್ದರು. ಹೋಗುತ್ತಿದ್ದಾಗ ಬೆಂಗಳೂರಿನ ಮಾಗಡಿ ರೋಡ್ ಬಳಿ ಶ್ರೀಗಳು ಬೈಕಿನ ಹಿಂಬದಿ ಕೂತಿದ್ದ ಶ್ರೀಗಳು ಹಂಪ್ ನಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ದರು. ಪರಿಣಾಮ ಗಾಯಗೊಂಡು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243