ದಿನದ ಸುದ್ದಿ

ಡಿಕೆಶಿಗೆ ಐಟಿಯಿಂದ ಮತ್ತೆ ಶಾಕ್ : ಬಂಧನದ ಭೀತಿ..!

Published

on

ಸುದ್ದಿದಿನ, ಬೆಂಗಳೂರು : ಡಿಕೆಶಿ ಗೆ ಮತ್ತೊಂದು ಕಂಟಕ ಶುರುವಾಗಿದೆ. ಐಟಿ ಇಲಾಕೆ ಡಿಕೆಶಿ ವಿರುದ್ದ ಮತ್ತೊಂದು ದೂರು ದಾಖಲು ಮಾಡಿಕೊಂಡಿದ್ದು, ಈಗಾಗಲೇ ಮೂರು ಕೇಸ್ ಅನ್ನು ಐಟಿ ಇಲಾಖೆಯು ದಾಖಲು ಮಾಡಿಕೊಂಡಿದೆ.

ಕೋಟ್ಯಾಂತರ ರೂಪಾಯಿ ವ್ಯವಹಾರ ಮುಚ್ಚಿಟ್ಟ, ತೆರಿಗೆ ವಂಚನೆ ಆರೋಪ, ಐಟಿ ಕಾಯಿದೆ ಸೆಕ್ಷನ್ 277 ಹಾಗೂ278 ಹಾಗು ಐಪಿಸಿ 193, 199, 120(ಬಿ) ಅಡಿ ಐಟಿ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದೆ.

ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಕೋರ್ಟ್, ನ್ಯಾ.ಎಂ.ಎಸ್.ಆಳ್ವಾ ಅವರಿಂದ ವಿಚಾರಣೆ ನಡೆಸಿ ಡಿಕೆಶಿ, ಸಚಿನ್‌ನಾರಯಣ್, ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಹಾಗೂ ರಾಜೇಂದ್ರ ವಿರುದ್ಧ ಎಲ್ಲಾ ಆರೋಪಿಗಳಿಗೂ ಸಮನ್ಸ್ ಜಾರಿಮಾಡಿದೆ.

ಆಗಸ್ಟ್ 2 ರಂದು ಡಿಕೆಶಿ ಸೇರಿ ಎಲ್ಲಾ ಆರೋಪಿಗಳು ಖುದ್ದು ಹಾಜರಿಗೆ ಸಮನ್ಸ್ ನೀಡಿದ್ದು, ಈ ಮೊದಲು ದಾಖಲಿಸಿರುವ ಕೇಸ್ ಗಳಲ್ಲಿ ಜಾಮೀನು ಪಡೆದಿದ್ದರು ಡಿಕೆಶಿ. ಇದೀಗ ದಾಖಲಾಗಿರುವ ಕೇಸ್‌ ನಲ್ಲಿ ಮತ್ತೆ ಡಿಕೆಶಿ ಗೆ ಬಂಧನ ಭೀತಿ ಎದುರಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9985715401

Leave a Reply

Your email address will not be published. Required fields are marked *

Trending

Exit mobile version