ದಿನದ ಸುದ್ದಿ
ಗ್ರಾಹಕರಿಗೆ ಶಾಕ್ : ಗ್ಯಾಸ್ ಸಿಲಿಂಡರ್ 250 ರೂ ಮತ್ತೆ ಏರಿಕೆ
ಸುದ್ದಿದಿನ,ನವದೆಹಲಿ: ಸತತವಾಗಿ ಕಳೆದ ಒಂದು ವಾರದಿಂದ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ದರದ ನಡುವೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯೂ 250 ರೂ ಏರಿಕೆಯಾಗಿರುವುದು ಗ್ರಾಹಕರಿಗೆ ಶಾಕ್ ನೀಡಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಮತ್ತೆ ಏರಿಸಿದೆ. ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ 19 ಕೆಜಿ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 250 ರೂ. ಗಳಷ್ಟು ಹೆಚ್ಚಿಸಿದೆ. ಎಲ್‌ಪಿಜಿ ಪರಿಷ್ಕೃತ ದರವನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಎಲ್‌ಪಿಜಿ ಸಿಲಿಂಡರ್ ಬೆಲೆ ಇದೇ ಮೊದಲಬಾರಿಗೆ 250 ರೂ. ಏರಿಕೆಯಾಗಿರುವುದು ಕಂಡುಬಂದಿದೆ.
ಇಂದಿನಿಂದಲೇ ಬೆಲೆ ಹೆಚ್ಚಳವಾಗಿದ್ದು ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ಸಿಲಿಂಡರ್‌ನ ಬೆಲೆ ಪ್ರತಿ ಯೂನಿಟ್‌ಗೆ 2,253 ರೂ., ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ 2,351 ರೂ., ಮುಂಬೈ ಮತ್ತು ಚೆನ್ನೈನಲ್ಲಿ, ಇದು ಕ್ರಮವಾಗಿ ರೂ 2,205 ಮತ್ತು 2,406 ಬೆಲೆಗೆ ಮಾರಾಟವಾಗುತ್ತಿದೆ.
👉 19kg Commercial LPG cylinder price hiked by ₹250 to ₹2,253/cylinder
👉In the last 2 months, price of 19kg Commercial LPG cylinder has been hiked by ₹346/cylinder#MehangaiMuktBharat#LPGPriceHike #PriceHike pic.twitter.com/9C6JNB3Fk1
— Odisha Pradesh Congress Sevadal (@SevadalOR) April 1, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243