ದಿನದ ಸುದ್ದಿ

ಶಾಕಿಂಗ್ ನ್ಯೂಸ್: ಎರಡು ಲಕ್ಷ ಮಕ್ಕಳು ನಾಪತ್ತೆ

Published

on

ಸುದ್ದಿದಿನ ಡೆಸ್ಕ್: ಸುಪ್ರೀಂ ಕೋರ್ಟ್‌ಗೆ ಎರಡು ಸರ್ಕಾರಗಳ ಸಲ್ಲಿರುವ ಸಮೀಕ್ಷಾ ವರದಿಯಲ್ಲಿ ಶಾಕಿಂಕ್ ನ್ಯೂಸ್ ಹೊರಬಿದ್ದಿದ್ದು, ದೇಶಾದ್ಯಂತ ಇರುವ ಸರ್ಕಾರಿ ನಿಲಯಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ಎರಡು ಲಕ್ಷಕ್ಕೂ ಅಧಿಕ ಮಕ್ಕಳು ನಾಪತ್ತೆಯಾಗಿರುವ ಆತಂಕಕಾರಿ ವಿಷಯ ಬಹಿರಂಗವಾಗಿದೆ. ಈಚೆಗಷ್ಟೇ ಉತ್ತರಪ್ರದೇಶದ ಬಾಲಕಿಯರ ನಿಲಯದಲ್ಲಿ ಅತ್ಯಾಚಾರ ಎಸಗಿ ಹೂತು ಹಾಕಿದ್ದ ಘಟನೆಯ ಬೆನ್ನಲ್ಲೇ ದೇಶವೇ ಶಾಂಕ್ ಆಗುವ ಮಾಹಿತಿ ಬಹಿರಂಗವಾಗಿದೆ.

ಕೇಂದ್ರ ಮಹಿಳಾ ಮಕ್ಕಳಾಭಿವೃದ್ಧಿ ಸಚಿವಾಲಯ 2016-17ನೇ ಸಾಲಿನಲ್ಲಿ ದೇಶಾದ್ಯಂತ ಇರುವ ಸರ್ಕಾರಿ ಮಕ್ಕಳ ನಿಲಯಗಳಲ್ಲಿ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿದೆ. ಈ ವರದಿಯ ಪ್ರಕಾರ 4.73 ಮಕ್ಕಳು ಸರ್ಕಾರಿ ನಿಲಯಗಳಲ್ಲಿ ವಾಸಿಸುತ್ತಿರುವುದಾಗಿ ದಾಖಲಾಗಿದೆ. ಆದರೆ, ಸುಪ್ರೀಂ ಕೋರ್ಟ್‌ಗೆ ಮಾರ್ಚ್‌ನಲ್ಲಿ ಕೇಂದ್ರ ಸಲ್ಲಿಸಿದ ವರದಿಯಲ್ಲಿ 2.61 ಮಕ್ಕಳು ಕಡಿಮೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನು ಕೇಂದ್ರವು ರಾಜ್ಯ ಸರ್ಕಾರಗಳಿಂದ ಪಡೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್, ಎಸ್. ಅಬ್ದುಲ್ ನಜೀರ್, ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ, ಬಹಳ ಗೊಂದಲಕ್ಕೀಡಾಗಿದ್ದು, ಮಕ್ಕಳು ಕೇವಲ ಅಂಕಿಗಳಲ್ಲ, ವರದಿಯಲ್ಲಿ ಅಂಶಗಳು ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ. ಮಕ್ಕಳನ್ನು ಕೇವಲ ಅಂಕಿಗಳಂತೆ ಪರಿಗಣಿಸಿರುವುದು ನಮಗೆ ನೋವು ತಂದಿದೆ. ಅವರಿಗೂ ಹೃದಯವಿದೆ, ಅವರಿಗೂ ಮನಸ್ಸಿದೆ ಎಂದು ಹೇಳಿ ತಾರತಮ್ಯವನ್ನು ಎತ್ತಿಹಿಡಿದಿದೆ.

ಹಣದಾಸೆಗಾಗಿ ನಿಲಯಗಳು ಸುಳ್ಳು ಮಾಹಿತಿ ನೀಡಿವೆಯೋ ಅಥವಾ ಏನು ಮಾಡಿವೆಯೋ ನಮಗೆ ತಿಳಿಯುತ್ತಿಲ್ಲ.
 ನ್ಯಾಯಮೂರ್ತಿ ಲೋಕೂರ್

ದೇಶದಲ್ಲಿ ಇರುವ 9,589 ಶಿಶುಪಾಲನಾ ಸಂಸ್ಥೆಗಳಿವೆ. 1,596 ಶಿಶುಪಾಲನಾ ಸಂಸ್ಥೆಗಳಲ್ಲಿ ಮಕ್ಕಳ ಸಂಖ್ಯೆ ಮೀತಿ ಮೀರಿದೆ. 97 ಜಿಲ್ಲೆಗಳಲ್ಲಿ ಶಿಶುಪಾಲನಾ ಸಂಸ್ಥೆಗಳಿಲ್ಲ. ಈ ನಿಲಯಗಳಲ್ಲಿ ಎಷ್ಟು ಮಕ್ಕಳ ಮೇಲೆ ದೈಹಿಕ ಹಲ್ಲೆ ಸೇರಿ ಇತರ ರೀತಿಯಲ್ಲಿ ಶಿಕ್ಷೆ ನೀಡಲಾಗುತ್ತಿದೆ. ಈ ಎರಡು ಲಕ್ಷ ಮಕ್ಕಳನ್ನು ಹೊರತುಪಡಿಸಿ ದೇಶದಲ್ಲಿ ಇನ್ನು ಎಷ್ಟು ಮಕ್ಕಳು ನಾಪತ್ತೆಯಾಗಿದ್ದಾರೆ‌ ಎಂದು ಮಾಹಿತಿ ನೀಡುವಂತೆ ಸರ್ಕಾರಿ ಅಧಕಾರಿಗಳನ್ನು ಸುಪ್ರೀಂ ಕೋರ್ಟ್ ಸಮಜಾಷಿಸಿದೆ‌.

ಶಿಶುಪಾಲನಾ ಮಂದಿರಗಳ ಮೇಲೆ ನಿಗಾ ಇಡಲು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿ ರಚನೆ ಕುರಿತು ನ್ಯಾಯಪೀಠ ಪ್ರಸ್ತಾಪ ಮಾಡಿದ್ದು, ಕೇಂದ್ರದ ಸಲಹೆ, ಸೂಚನೆಗಳನ್ನು ಪಡೆಯಲು ಸಮಯ ನೀಡಿದೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version