ಲೈಫ್ ಸ್ಟೈಲ್
ಕೃಷ್ಣಾವತಾರಂ..!
ಶ್ರೀ ಕೃಷ್ಣ ಜನ್ಮಾಷ್ಟಮಿಯಾದ ಇಂದು ಶ್ರೀ ಕೃಷ್ಣನ ಬಾಲಲೀಲೆ ಗಳ ನೆನೆದು ಸಮಸ್ತ ಭಾರತೀಯರು ಶ್ರದ್ಧಾ-ಭಕ್ತಿ ಗಳಿಂದ ಬಾಲ ಕೃಷ್ಣ ನ ಆರಾಧನೆಯಲ್ಲಿ ತಲ್ಲೀನರಾಗಿದ್ದಾರೆ. ಯಶೋಧೆ ದೇವಕಿಯ ನಂದಲೋಲನ ತುಂಟಾಟಗಳಿಗೆ ಕೊನೆಯ ಇಲ್ಲ. ಈ ಪುಟ್ಟ ದಿವ್ಯ ಕಂದನ ಆರಾಧನೆಯಲ್ಲಿ ಇಡೀ ವಿಶ್ವವೇ ಸಂಭ್ರಮಿಸುತ್ತಿದೆ. ಕೃಷ್ಣನ ದೇವಾಲಯಗಳಲ್ಲಿ ರಾತ್ರಿಯಿಂದಲೇ ವಿಶೇಷ ಪೂಜೆ-ಅಲಂಕಾರ ನೈವೇದ್ಯ ಗಳು ಭರ್ಜರಿ ಯಾಗಿ ಸಾಗಿದೆ.
ಕೃಷ್ಣ ಜನ್ಮಾಷ್ಟಮಿ ಯ ಅಂಗವಾಗಿ ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಹಸ್ರಾರು ಚಿಣ್ಣರು ಶ್ರೀ ಕೃಷ್ಣನ ಅವತಾರದಲ್ಲಿ ನಕ್ಕು-ನಲಿಯುವ ಸಂಭ್ರಮಿಸುತ್ತಿದ್ದಾರೆ. ಮನೆಗಳಲ್ಲಿ ಶ್ರೀ ಕೃಷ್ಣನ ಹೆಜ್ಜೆ ಬರೆದು ಮನೆಯ ಮಕ್ಕಳಿಗೆ ಕೃಷ್ಣ-ರಾಧೆಯ ಅಲಂಕಾರ ಮಾಡಿ ನೋಡಿ ಖುಷಿಯ ಅಲೆಯಲ್ಲಿ ಮಿಂದೇಳುತ್ತಿದ್ದಾರೆ ಕೃಷ್ಣ ನ ಆರಾಧಕರು. ಎಲ್ಲವೂ ಕೃಷ್ಣ ಮಹಿಮೆ.
ಸರ್ವೇ ಜನ ಸುಖಿನೋಭವಂತೂ
ಸರ್ವ ಸನ್ಮಂಗಳಾನಿ ಭವಂತೂ