/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಬೆಣ್ಣೆ ನಗರಿಯಲ್ಲೊಂದು ರಾಯಲ್ ರುಚಿ ‘ಶ್ರೀಮಂಜುನಾಥ ಫಾಸ್ಟ್ ಫುಡ್’ ಹೋಟೆಲ್ ಶುಭಾರಂಭ : ಮಿಸ್ ಮಾಡ್ದೆ ಭೇಟಿ ಕೊಡಿ..!

Published

on

ಸುದ್ದಿದಿನ, ದಾವಣಗೆರೆ : ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಉಪಹಾರ ಮತ್ತು ಊಟ ದೊರೆಯುವ ‘ಶ್ರೀ ಮಂಜುನಾಥ ಪಾಸ್ಟ್ ಫುಡ್’ ಹೋಟೆಲ್ ದಾವಣಗೆರೆಯ ಎಂ‌ಸಿಸಿ ಬಿ ಬ್ಲಾಕ್ ನಲ್ಲಿ ಶುಭಾರಂಭ ಮಾಡಿದೆ.

ಕೇವಲ ಒಂದು ತಿಂಗಳ ಹಿಂದೆಯಷ್ಟೇ ಆರಂಭವಾದ ಈ ಹೋಟೆಲ್ ಶುಚಿ-ರುಚಿ-ಗುಣಮಟ್ಟಕ್ಕೆ ಹೆಸರಾಗಿದೆ. ಗ್ರಾಹಕರು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೋಟೆಲ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಒಮ್ಮೆ ಹೋಟೆಲ್ ಅಡುಗೆಯ ರುಚಿ ನೋಡಿದವರು ಮತ್ತೊಮ್ಮೆ ಬಂದು ಸೇವಿಸುವಂತಹ ವಾತಾರಣ ಸೃಷ್ಟಿಸಿದ್ದಾರೆ.

ಹೋಟೆಲ್ ಉದ್ಯಮದಲ್ಲಿ ಯಶಸ್ಸು ಕಂಡಿರುವ
ಮಾಲೀಕರಾದ ಅಂಜು ಬಣಕಾರ್ ಅವರು,
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಹೋಟೆಲ್ ಇದ್ದು ದಿನಕ್ಕೆ ಎರಡು ಸಾವಿರ ಜನರಿಗೆ ಉಪಹಾರ-ಊಟ ಪೂರೈಕೆ ಮಾಡುತ್ತಾರೆ‌. ಈಗ ದಾವಣಗೆರೆಯ ಜನತೆಗೆ ತಮ್ಮ ಹೋಟೆಲ್ ಮೂಲಕ ಕ್ಯಾಟರಿಂಗ್, ಫ್ರೀ ಹೋಂ ಡಿಲೆವರಿ ವ್ಯವಸ್ಥೆಗೆ ತಯಾರಾಗಿದ್ದಾರೆ.

ಬಗೆ-ಬಗೆಯ ಉಪಹಾರ

ಹೋಟೆಲ್ ನಲ್ಲಿ ಬಗೆ-ಬಗೆಯ ಉಪಹಾರವನ್ನು ದಿನಕ್ಕೊಂದು ಮೆನುವಿನ ಪ್ರಕಾರ ಮಾಡಲಾಗುತ್ತದೆ.

ಶಾವಿಗೆ ಬಾತ್, ಚೌ ಚೌ ಬಾತ್, ಬಿಸಿಬೇಳೆ ಬಾತ್, ತಟ್ಟೆ ಇಡ್ಲಿ, ಇಡ್ಲಿ-ವಡಾ, ಖಾರಾ ಪೊಂಗಲ್, ಮಂಗಳೂರು ಬನ್ಸ್ , ಬೋಂಡಾ ಸೂಪ್,ಪಾಲಕ್ ಪೂರ, ಲೆಮೆನ್ ರೈಸ್, ಪಲಾವ್, ಚಿತ್ರಾನ್ನ, ದೋಸೆ, ಮಸಾಲ ಅವಲಕ್ಕಿ, ಪುಳಿಯೋಗರೆ ಇನ್ನೂ ಹಲವು ವಿಶೇಷ ಉಪಹಾರದ ರುಚಿಯನ್ನು ಗ್ರಾಹಕರಿಗೆ ಉಣಬಡಿಸಲು ತಯಾರಿದ್ದಾರೆ.

ಅಂಜು ಬಣಕಾರ್, ಹೋಟೆಲ್ ಮಾಲೀಕರು

40 ರೂಪಾಯಿಗೆ ಊಟ

ಮಧ್ಯಾಹ್ನ ಮತ್ತು ರಾತ್ರಿ ಊಟ ದೊರೆಯುತ್ತದೆ. ಕೇವಲ ನಲವತ್ತು (40) ರೂಪಾಯಿ ರೂಪಾಯಿಗೆ ಎರಡು ತೆರನಾದ ಪಲ್ಯ, ಉಪ್ಪಿನ ಕಾಯಿ, ಮೊಸರು, ಚಪಾತಿ, ಅನ್ನ, ಹಪ್ಪಳ ಕೊಡಲಾಗುತ್ತೆ.
ರೋಟಿ – ಪರೋಟ ಊಟ, ಫೂರಿ ಊಟ ಲಭ್ಯವಿದ್ದು “ಗ್ರಾಹಕರ ತೃಪ್ತಿಗೆ ನಮ್ಮ ಮೊದಲ ಆದ್ಯತೆ” ಎನ್ನುತ್ತಾರೆ ಹೋಟೆಲ್ ನ ಮಾಲೀಕರಾದ ಅಂಜು ಬಣಕಾರ್ ಹೇಳುತ್ತಾರೆ.

ಸಂಜೆ ಸ್ನಾಕ್ಸ್

ಗೋಬಿ‌ ಮಂಚೂರಿ, ಗೋಬಿ ರೈಸ್, ಮಶ್ರೂಮ್, ನೂಡಲ್ಸ್, ವೆಜ್ ಫ್ರೈಡ್ ರೈಸ್, ಪನ್ನೀರ್ ಸ್ನಾಕ್ಸ್ಗಳನ್ನು ಗ್ರಾಹಕರು ಸವಿಯ ಬಹುದು.

ಕ್ಯಾಟರಿಂಗ್ ವ್ಯವಸ್ಥೆ

ಮದುವೆ, ನಾಮಕರಣ, ನಿಶ್ಚಿತಾರ್ಥ, ಸಾರ್ವಜನಿಕ ಕಾರ್ಯಕ್ರಮಗಳು ಹಾಗು ಇತರೆ ಶುಭ-ಸಮಾರಂಭಗಳಿಗೆ ಕ್ಯಾಟರಿಂಗ್ ಮಾಡುವ ವ್ಯವಸ್ಥೆಯೂ ಶ್ರೀ ಮಂಜುನಾಥ ಪಾಸ್ಟ್ ಫುಡ್ ಸೆಂಟರ್ ನಲ್ಲಿ ಲಭ್ಯವಿದೆ. ನಿಗಧಿ ಪಡಿಸಿದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಉಪಹಾರ-ಊಟ ವನ್ನು ತಲುಪಿಸುವುದರ ಜೊತೆಗೆ, ಬಡಿಸುವ ವ್ಯವಸ್ಥೆಯನ್ನೂ ಸಹ ಮಾಡಿಕೊಡಲಾಗುತ್ತದೆ.

ಫ್ರೀ ಹೋಂ ಡಿಲೆವರಿ

ನೀವು ಆರ್ಡರ್ ಮಾಡಿದ ಉಪಾಹಾರ-ಊಟಕ್ಕೆ ಹಣ ಪಾವತಿಸಿದರೆ ಸಾಕು, ಡಿಲೆವರಿ ಬಾಯ್ ಉಚಿತವಾಗಿ ಗ್ರಾಹಕರು ಸೂಚಿಸಿದ ಸ್ಥಳಕ್ಕೆ ಬಂದು ತಲುಪಿಸುತ್ತಾರೆ.

ಕರೆಮಾಡಿ, ಆರ್ಡರ್ ಮಾಡಿ : 7760262693


  • ಕೆಲವು ದಿನಗಳಿಂದ ಮಂಜುನಾಥ ಹೋಟೆಲ್ ನಲ್ಲಿ ಉಪಹಾರ ಸೇವಿಸುತ್ತಿದ್ದೇನೆ. ಕ್ಯಾಲಿಟಿ ಮತ್ತು ಕ್ವಾಂಟಿಟಿ ತುಂಬಾ ಚನ್ನಾಗಿದೆ.

| ಸುರೇಶ, ಗ್ರಾಹಕರು

  • ಕೇವಲ ನಲವತ್ತು ರೂಪಾಯಿಗೆ ಊಟ ಕೊಡ್ತಾರೆ, ಬೇರೆ ಹೋಟೆಲ್ ನಲ್ಲಾಗಿದ್ರೆ ಇನ್ನೂ ಹೆಚ್ಚು ಬೆಲೆ ನಿಗಧಿ ಪಡಿಸುತ್ತಿದ್ದರು. ಕಡಿಮೆ ಬೆಲೆಯ ಊಟ ಆದ್ರೂ ಹೊಟ್ಟೆ ತುಂಬ ಕೊಡ್ತಾರೆ.

| ನವೀನ್, ವಿದ್ಯಾರ್ಥಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version