ದಿನದ ಸುದ್ದಿ

ಹರ್ಷ ಸಹೋದರಿಯ ನಡೆಯಿಂದ ಶ್ರೀ ರಾಮಸೇನೆ ಕಾರ್ಯಕರ್ತರಿಗೆ ಬೇಜಾರಾಗಿದೆ : ಗೃಹ ಸಚಿವ ಅರಗ ಜ್ಞಾನೇಂದ್ರ

Published

on

ಸುದ್ದಿದಿನ,ಬೆಂಗಳೂರು: ಹತ್ಯೆಯಾದ ಹರ್ಷ ಸಹೋದರಿ ಅಶ್ವಿನಿ ಅವರ ನಡೆಯ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿದ್ದಾರೆ‌.

ಹರ್ಷ ಅವರ ಸಹೋದರಿಗೆ ನಾನು ಕೂಡ ತಕ್ಷಣ ಹೋಗಿ ಸಾಂತ್ವಾನ ಹೇಳಿದ್ದೇನೆ. ಏನೂ ಮಾಡಬೇಕೋ ಎಲ್ಲವನ್ನು ಮಾಡಿದ್ದೇನೆ. ಜೈಲಿನಲ್ಲಿ ಏನೋ ನಡೆಯಿತು, ಮೊಬೈಲ್ ಸಿಕ್ತು ಅಂತಾ ಇಷ್ಟೆಲ್ಲಾ ಮಾಡ್ತಿದ್ದಾರೆ. ಅವರಿಗೆ ನಾನು ಏನು ಮಾಹಿತಿ ಕೊಡಬೇಕಿತ್ತೋ ಅದನ್ನೆಲ್ಲಾ ಕೊಟ್ಟಿದ್ದೇನೆ. ಆದರೆ ಅವರಿಗೆ ಯಾಕೋ ಸಮಾಧಾನ ಇಲ್ಲ. ನಾನೊಬ್ಬ ಗೃಹ ಸಚಿವನಾಗಿ ಅವರಿಗೆ ಏನು ಮಾಹಿತಿ ಕೊಡಬಹುದಿತ್ತೋ ಅದನ್ನು ಕೊಟ್ಟಿದ್ದೇನೆ ಎಂದರು.

ಯಾವ ಅಗೌರವವನ್ನು ನಾನು ತೋರಿಲ್ಲ. ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಅವರು ನನ್ನ ಬಳಿ ಸಮಾಧಾನದಿಂದ ಮಾತನಾಡಲಿಲ್ಲ. ಶ್ರೀರಾಮಸೇನೆಯ 20 ಜನರ ಜೊತೆಗೆ ಬಂದಿದ್ದರು. ಆ ರೀತಿಯ ವರ್ತನೆಯಿಂದ ಅವರ ಜೊತೆ ಬಂದಿದ್ದ ಶ್ರೀರಾಮಸೇನೆ ಕಾರ್ಯಕರ್ತರಿಗೂ ಸಹ ಬೇಜಾರಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version