ಲೋಕಾರೂಢಿ
ಪುಣ್ಯಸ್ಥಳದಲ್ಲೂ ರಾಜಕೀಯ ಕರಾಮತ್ತು!
‘ಕಾಯಕವೇ ಕೈಲಾಸ’ ಎಂಬ ಬಸವ ತತ್ವದಂತೆ ನಡೆದ, ಕರ್ನಾಟಕ ಕಂಡ ಮಾತನಾಡುತ್ತಾ ನಡೆದಾಡುವ ದೇವರು, ತ್ರೀವಿಧ ದಾಸೋಹಿ, ಅನಾಥ ರಕ್ಷಕ, ಕರ್ನಾಟಕ ರತ್ನ, ಮಕ್ಕಳ ಪಾಲಿನ ವಿದ್ಯಾಗುರು ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ತುಮಕೂರಿನ ಸಿದ್ದಗಂಗೆಯ ಪಿಠಾಧೀಶರಾದ ಪೂಜ್ಯ ಡಾ. ಶಿವಕುಮಾರ ಸ್ವಾಮಿಗಳು ಸೋಮವಾರ ಬೆಳಗ್ಗೆ 11:44ಗಂಟೆಗೆ ಸಿದ್ದಗಂಗೆಯ ಹಳೆಮಠದಲ್ಲಿ ಲಿಂಗೈಕ್ಯರಾದರು.
ಈ ವಿಷಯ ತಿಳಿದ ನಾಡಿನ ಸಮಸ್ಥ ಜನತೆ ದುಃಖದ ಸಾಗರದಲ್ಲಿ ಮುಳುಗಿತ್ತು. ಒಂದು ಕಡೆ ಶ್ರೀಗಳ ಅಂತಿಮ ದರ್ಶನ ಪಡೆಯಲೆಂದು ಭಕ್ತರ ದಂಡೆ ಮಹಾಸಾಗರವಾಗಿ ಹರಿದು ಬಂದರೆ, ಇಂತಹ ಸ್ಥಿತಿಯಲ್ಲಿ ಮತ್ತೊಂದು ಕಡೆ ರಾಜಕಿಯ ನಾಯಕರ ವರ್ತನೆಯಿಂದ ತಲೆ ತಗ್ಗಿಸುವಂತಾಗಿದೆ. ಹೌದು ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ಷಣೆ ಕೊಡಲು ಸಾಧ್ಯವಾಗದ ಕಾರಣ ನಾಯಕರು ಬರುತ್ತಿಲ್ಲ.
ನಾಯಕರಿಗೆ ರಕ್ಷಣೆ ಕೊಡುತ್ತಾ ಕುಳಿತ್ತರೆ ಜನಸಾಮಾನ್ಯರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾವರ್ಗದ ಮುಂದೆ ಸ್ಪಷ್ಟನೆ ನೀಡಿದ್ದಾರೆ. ಆದರು ಸಹ ರಾಜಕಿಯದ ಕೆಲವು ವ್ಯಕ್ತಿಗಳು ಶ್ರೀಗಳ ಅಂತಿಮ ದರ್ಶನ ಪಡೆಯಲು ಆ ಪಕ್ಷದ ನಾಯಕ ಬರಬೇಕಿತ್ತು? ಬಂದಿಲ್ಲ. ಈ ಪಕ್ಷದ ನಾಯಕರು ಬರಬೇಕಿತ್ತು? ಬಂದಿಲ್ಲ ಎನ್ನುತ್ತಾ ಪರಸ್ಪರ ಕೆಸರು ಎರಚಾಟ ಮಾಡಿಕೊಲ್ಳುತ್ತಿದ್ದಾರೆ. ಇಂತಹ ರಾಜಕೀಯ ಎಲ್ಲ ಸಮಯದಲ್ಲೂ ಬೇಕಾ?.
ಇಲ್ಲಿ ಶ್ರೀಗಳ ಅಂತಿಮ ದರ್ಶನ ಪಡೆಯಲು ರಾಜ್ಯದಲ್ಲಿಯೇ ಇದ್ದ ಎಷ್ಟೋ ಜನ ಮಹಾನ ನಟ, ನಟಿಯರು ಹಾಗೂ ರಾಜ್ಯ ರಾಜಕಿಯದಲ್ಲಿರುವ ಮಾಜಿ, ಹಾಲಿ, ನುತನ ಸಚಿವರುಗಳು, ಹಾಗೂ ಶಾಸಕರು ಗೈರಾಗಿದ್ದರೆ. ಅವರಿಗೆಲ್ಲ ಶ್ರೀಗಳು ಬೇಡವಾಗಿದ್ದಾರೆ?, ಕೆವಲ ರಾಜಕಿಯ ಪಕ್ಷಗಳ ಕೇಂದ್ರದಲ್ಲಿರುವ ನಾಯಕರಿಗೆ ಮಾತ್ರ ಶ್ರೀಗಳು ಬೇಕಾದರೇ? ಎನ್ನುವ ರೀತಿಯಲ್ಲಿ ದ್ವಂದ್ವ ಸೃಷ್ಠಿಯಾಯಿತು. ಇಂತಹ ಸಮಯದಲ್ಲಾದರು ತಮ್ಮ ರಾಜಕಿಯ ತಿಕಾಟವನ್ನು ಬಿಟ್ಟು ದೇಶದ ಅಭಿವೃದ್ದಿಯತ್ತ ಗಮನ ನೀಡುವುದರ, ಜೋತೆಗೆ ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು, ಮಾತನಾಡಬಾರದು, ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಉತ್ತಮವೆಂದು ಅನಿಸುತ್ತಿದೆ.
-ಕಾಂಚನಾ. ಬಸವರಾಜ. ಪೂಜಾರಿ
ಪತ್ರಿಕೋದ್ಯಮ ಮತ್ತು ಸಮುಹ ಸಂವಹನ ವಿಭಾಗ,ಪ್ರಥಮ ವರ್ಷದ ವಿದ್ಯಾರ್ಥಿನಿ,
ಅಕ್ಕ ಮಹಾದೇವಿ ವಿಶ್ವವಿದ್ಯಾನಿಲಯ ತೋರವಿ
ವಿಜಯಪುರ
ಸುದ್ದಿದಿನ.ಕಾಂ|ವಾಟ್ಸಾಪ್|9986715401