ದಿನದ ಸುದ್ದಿ
ಸವಾಲೆಸೆಯುವಾಗ ನಿಮ್ಮ ಅಣ್ತಮ್ಮಂದಿರು ಜೈಲು ಪಾಲಾದದ್ದು ಗಮನದಲ್ಲಿರಲಿ : ಶ್ರೀರಾಮುಲುಗೆ ಸಿದ್ದರಾಮಯ್ಯ ಎದಿರೇಟು
ಸುದ್ದಿದಿನ, ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಹಭಾಸ್ ಗಿರಿ ಪಡೆದ ಮುಖ್ಯಮಂತ್ರಿ ಅವರಿಗೆ ಅಭಿನಂದನೆಗಳು. ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕೊರೊನಾ ನಿಯಂತ್ರಣದ ವೈಫಲ್ಯಗಳ ಸರಣಿ ವರದಿಗಳನ್ನೂ ಅವರಿಗೆ ತೋರಿಸಿದ್ದರೆ ಇನ್ನಷ್ಟು ಶಹಭಾಸ್ ಅನ್ನುತ್ತಿದ್ದರೋ ಏನೋ? ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ನೆರವು ನೀಡುತ್ತೀರಿ ಎಂದು ಪ್ರಧಾನಿ ಅವರನ್ನು ಕೇಳಬೇಕಿತ್ತಲ್ಲವೇ? ಪಿ.ಎಂ ಕೇರ್ಸ್ ನಿಧಿಯಿಂದ ರಾಜ್ಯಕ್ಕೆ ಎಷ್ಟು ದುಡ್ಡು ಕಳಿಸಿದ್ದೀರಿ ಎಂದು ಪ್ರಧಾನಿಗಳನ್ನು ವಿಚಾರಿಸಬೇಕಿತ್ತಲ್ಲವೇ? ಸುಳ್ಳು ಆಶ್ವಾಸನೆ ನೀಡಿದ್ದರೂ ನೊಂದ ಜನರಿಗೆ ಸ್ವಲ್ಪ ನೆಮ್ಮದಿ ಸಿಗುತ್ತಿತ್ತು.
ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ತ್ರಿಮೂರ್ತಿ ಸಚಿವರನ್ನು ನೇಮಿಸಿರುವುದು ಸೋಂಕಿತರಿಗೆ ನೆರವಾಗಲಿಕ್ಕಾ? ಇಲ್ಲವೇ, ಭಿನ್ನಾಭಿಪ್ರಾಯವನ್ನು ಶಮನ ಮಾಡಲಿಕ್ಕಾ? ಸೃಷ್ಟಿ, ಪಾಲನೆ, ಲಯ ಇವು ಆ ತ್ರಿಮೂರ್ತಿಗಳ ಕರ್ತವ್ಯವಂತೆ. ಈ ಮೂವರು ಇವುಗಳಲ್ಲಿ ಯಾವ ಕೆಲಸ ಮಾಡಲಿದ್ದಾರಂತೆ? ಎಂದು ಪ್ರಶ್ನಿಸಿದರು.
ಲೂಟಿ ಹೊಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ.
ರಾಮುಲು ಅವರೇ, ಬಳ್ಳಾರಿಯ ನಿಮ್ಮ ಅಣ್ತಮ್ಮಂದಿರು ಇದೇ ರೀತಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗ ಜೈಲು ಸೇರಿದ್ದರು. ಸವಾಲೆಸೆಯುವಾಗ ಇದು ನಿಮ್ಮ ಗಮನದಲ್ಲಿರಲಿ ಎಂದು ಎದುರೇಟು ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243