/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಸಿದ್ದು- ರೆಡ್ಡಿ ಆರೋಪ- ಪ್ರತ್ಯಾರೋಪ; ಜೈಲಿಗೆ ಕಳುಹಿಸಿದ್ದು ನಿಮ್ಮವರೇ ಸಿದ್ದು ಟಾಂಗ್

Published

on

ಸುದ್ದಿದಿನ ಡೆಸ್ಕ್ : ಐದು ಕ್ಷೇತ್ರಗಳ ಉಪ ಚುನಾವಣೆಯ ಕಾವೇರುತ್ತಿದ್ದು, ರಾಜಕೀಯ ಮುಖಂಡರ ಆರೋಪ- ಪ್ರತ್ಯಾರೋಪಕ್ಕೆ ವೇದಿಕೆ ಸಿಕ್ಕಂತಾಗಿದೆ.

ಸಿದ್ದರಾಮಯ್ಯನವರು ಅನ್ಯಾಯವಾಗಿ ತನ್ನನ್ನು ನಾಲ್ಕು ವರ್ಷ ಜೈಲಿಗೆ ಹಾಕಿಸಿದ್ದರು ಎಂದು ಜನಾರ್ಧನ ರೆಡ್ಡಿ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತ್ಯಾರೋಪವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಜೈಲಿಗೆ ಯಾರು ಹಾಕಿಸಿದ್ದಾರೆ ಎಂದು ತಿಳಿದುಕೊಳ್ಳಲಿ. ನಿಮ್ಮ ಪಕ್ಷದ ಸಂಸದರೇ ಬರೆದಿದ್ದ ಈ ಪುಸ್ತಕ ಓದಿ. ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಎಂದು ಗೊತ್ತಾಗುತ್ತೆ ಎಂದು ಹೇಳಿದ್ದಾರೆ.

ಸನ್ಮಾನ್ಯ ಜನಾರ್ದನ ರೆಡ್ಡಿಯವರೇ, ನೀವು ಜೈಲಲ್ಲಿ‌ ಕೊಳೆಯುವಂತೆ ಮಾಡಿದ್ದು ಯಾರೆಂದು ತಾನು ಬರೆದ ಪುಸ್ತಕದಲ್ಲಿದೆ ಎಂದು ನಿಮ್ಮ ಗೆಳೆಯ ಪ್ರತಾಪಸಿಂಹ‌ ಟ್ವೀಟ್ ಮಾಡಿದ್ದರು ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಸರ್ಕಾರ ಕರ್ನಾಟಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಮಾತೃಪೂರ್ಣ, ಕ್ಷೀರಧಾರೆ, ಆರೋಗ್ಯ ಕರ್ನಾಟಕ, ರೈತ ಬೆಳಕು ಯೋಜನೆ ಮಾಡಿದೆ. ಆದರೆ, ಬಿಜೆಪಿ ಸರ್ಕಾರದ ಗಣಿಲೂಟಿಕೋರನ್ನು ಕೊಡುಗೆ ನೀಡಿದೆ. ಜನಾರ್ದನ ರೆಡ್ಡಿ ಸೋದರರು ಮತ್ತು ಅವರ ಬೆಂಬಲಕ್ಕೆ ಬಂಟ ಶ್ರೀರಾಮುಲು ನಿಂತಿದ್ದಾರೆ ಎಂದು ದೂರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version