ರಾಜಕೀಯ
ಬಡವರ ಕಷ್ಟಕ್ಕೆ ಮಿಡಿಯದ 56 ಇಂಚಿನ ಎದೆಯಿದ್ದು ಏನು ಉಪಯೋಗ? : ಮೋದಿ ವಿರುದ್ದ ಸಿದ್ದು ಕಿಡಿ
ಸುದ್ದಿದಿನ ಡೆಸ್ಕ್ : ಗೌರಿಬಿದನೂರಿನಲ್ಲಿ ನಿನ್ನೆ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇನ್ನು ಮುಂದೆ ಮೋದಿಯ ಮೋಡಿ, ಅಮಿತ್ ಶಾ ಮ್ಯಾಜಿಕ್ ಎಲ್ಲವೂ ಬರಿ ಕನಸಷ್ಟೆ. ಪಂಚ ರಾಜ್ಯ ಚುನಾವಣೆಯಲ್ಲಿ ಸೋಲುಂಡ ಬಿಜೆಪಿಗೆ ರಾಷ್ಟ್ರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಬೇಕಾದ ದುಸ್ಥಿತಿ ಬಂದಿದೆ ಎಂದರು.
ಬರೀ ಭಾಷಣಗಳು ಜನರ ಹೊಟ್ಟೆ ತುಂಬಿಸಲಾರದು ಎಂಬುದನ್ನು ಬಿಜೆಪಿ ಇನ್ನೂ ಅರಿತಿಲ್ಲ, ಹೀಗಾಗಿಯೇ ಕೋಮುವಾದ ಬಿಟ್ಟು ಅಭಿವೃದ್ಧಿಯ ಬಗ್ಗೆ ಅವರು ಮಾತಾಡುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಎಷ್ಟು ಸತ್ಯವೋ, ನಮ್ಮ ನಾಯಕರಾದ ಶ್ರೀಯುತ ರಾಹುಲ್ ಗಾಂಧಿ ಅವರು ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಜಯಗಳಿಸಿರುವ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡಲಾಗಿದೆ. ಹಿಂದೆ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಬಿಜೆಪಿ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳಾದರೂ ಬಡ ರೈತರ ಕಡೆಗೆ ಕಣ್ಣೆತ್ತಿ ನೋಡುತ್ತಿಲ್ಲ. ಬಡವರ ಕಷ್ಟಕ್ಕೆ ಮಿಡಿಯದ 56 ಇಂಚಿನ ಎದೆಯಿದ್ದು ಏನು ಉಪಯೋಗ? ಎಂದು ಕಿಡಿಕಾರಿದ್ದಾರೆ.
ಗೌರಿಬಿದನೂರಿನಲ್ಲಿ ಇಂದು ಆಯೋಜಿಸಿದ್ದ ಕನಕ ಜಯಂತೋತ್ಸವ ಹಾಗೂ ಕನಕ ಭವನಕ್ಕೆ ಗುದ್ದಲಿ ಪೂಜೆ ನೇರವೇರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. pic.twitter.com/NiPDRUR6A9
— Siddaramaiah (@siddaramaiah) December 24, 2018
ಸುದ್ದಿದಿನ.ಕಾಂ|ವಾಟ್ಸಾಪ್|9986715401