ದಿನದ ಸುದ್ದಿ
ಪಿಎಸ್ಐ ನೇಮಕಾತಿ ಹಗರಣ | ಸಚಿವ ಸುನೀಲ್ ಕುಮಾರ್ ತಾ ಕಳ್ಳ, ಇತರರ ನಂಬ : ಸಿದ್ದರಾಮಯ್ಯ ಲೇವಡಿ
ಸುದ್ದಿದಿನ ಬೆಂಗಳೂರು : ಪಿಎಸ್ಐ ನೇಮಕ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದ ಶಾಸಕ ಪ್ರಿಯಾಂಕ ಖರ್ಗೆಯವರನ್ನೇ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸುತ್ತಿರುವ ಸಚಿವ ಸುನೀಲ್ ಕುಮಾರ್ ಸ್ಥಿತಿ ‘ತಾ ಕಳ್ಳ, ಇತರರ ನಂಬ’ ಎಂಬಂತಾಗಿದೆ. ಈ ಬೆದರಿಕೆಗೆ ನಾವು ಜಗ್ಗುವುದಿಲ್ಲ. ಖರ್ಗೆಯವರ ಬೆನ್ನಹಿಂದೆ ಕಾಂಗ್ರೆಸ್ ಪಕ್ಷ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿದ್ದಾರೆ.
ಸಚಿವ ಸುನೀಲ್ ಕುಮಾರ್ ನೀಡಿದ ಹೇಳಿಕೆಯ ಬೆನ್ನಿನಲ್ಲಿಯೇ ಸಿಐಡಿ ಪೊಲೀಸರು ಪ್ರಿಯಾಂಕ ಖರ್ಗೆ ಅವರ ವಿಚಾರಣೆಗೆ ನೋಟೀಸ್ ನೀಡಿದ್ದನ್ನು ನೋಡಿದರೆ, ಬಿಜೆಪಿ ನಾಯಕರು ಹಗರಣದ ಬಗ್ಗೆ ಮಾತನಾಡುವವರ ಬಾಯಿಮುಚ್ಚಿಸುವ ಹುನ್ನಾರ ನಡೆಸುತ್ತಿರುವಂತೆ ಕಾಣುತ್ತಿದೆ.
ಅಡಿಯಿಂದ ಮುಡಿವರೆಗೆ 100% ಭ್ರಷ್ಟಾಚಾರದ ಮಸಿ ಬಳಿದುಕೊಂಡಿರುವ ರಾಜ್ಯದ ಬಿಜೆಪಿ ಸರ್ಕಾರವನ್ನು ಸುಳ್ಳುಗಳ ಬಣ್ಣಹೊಡೆದು ಅಳಿಸಲಾಗದು. ಸರ್ಕಾರ, ತನಿಖಾ ಸಂಸ್ಥೆಗಳು ನಿಮ್ಮ ನಿಯಂತ್ರಣದಲ್ಲಿರಬಹುದು, ರಾಜ್ಯದ ಜನತೆ ನಮ್ಮ ಜೊತೆ ಇದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಿಎಸ್ಐ ನೇಮಕ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದ ಶಾಸಕ @PriyankKharge ಅವರನ್ನೇ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸುತ್ತಿರುವ ಸಚಿವ @karkalasunil ಸ್ಥಿತಿ ‘ತಾ ಕಳ್ಳ, ಇತರರ ನಂಬ’ ಎಂಬಂತಾಗಿದೆ.
ಈ ಬೆದರಿಕೆಗೆ ನಾವು ಜಗ್ಗುವುದಿಲ್ಲ. ಖರ್ಗೆಯವರ ಬೆನ್ನಹಿಂದೆ @INCKarnataka ಪಕ್ಷ ಇದೆ. 1/3#PSISCAM pic.twitter.com/Dmsrrv51Zv
— Siddaramaiah (@siddaramaiah) April 25, 2022
ಸಚಿವ @karkalasunil ನೀಡಿದ ಹೇಳಿಕೆಯ ಬೆನ್ನಿನಲ್ಲಿಯೇ ಸಿಐಡಿ ಪೊಲೀಸರು @PriyankKharge ಅವರ ವಿಚಾರಣೆಗೆ ನೋಟೀಸ್ ನೀಡಿದ್ದನ್ನು ನೋಡಿದರೆ, @BJP4Karnataka ನಾಯಕರು ಹಗರಣದ ಬಗ್ಗೆ ಮಾತನಾಡುವವರ ಬಾಯಿಮುಚ್ಚಿಸುವ ಹುನ್ನಾರ ನಡೆಸುತ್ತಿರುವಂತೆ ಕಾಣುತ್ತಿದೆ. 2/3#PSISCAM pic.twitter.com/3R7IQL1dH9
— Siddaramaiah (@siddaramaiah) April 25, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243