ದಿನದ ಸುದ್ದಿ
ಮುಂದಿನ ಸಿಎಂ ಸಿದ್ದರಾಮಯ್ಯರಿಗೆ ಜೈ.. ಜೈ..! ; ಅಭಿಮಾನಿಗಳ ಘೋಷಣೆ
ಸುದ್ದಿದಿನ,ದಾವಣಗೆರೆ: ಇನ್ನು ಚುನಾವಣೆಯೇ ಘೋಷಣೆ ಆಗಿಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದಿದ್ದರೂ, ಅಭಿಮಾನಿಗಳು ಮಾತ್ರ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈ ಎಂಬ ಘೋಷಣೆ ಹಾಕುವುದನ್ನು ನಿಲ್ಲಿಸಿಲ್ಲ.
ಬಾಪೂಜಿ ಗೆಸ್ಟ್ ಹೌಸ್ ಗೆ ಬಂದು ವಿಶ್ರಾಂತಿ ಪಡೆದ ಬಳಿಕ ಹೊರಗಡೆ ಬರುವಾಗ ನೆರೆದಿದ್ದ ನೂರಾರು ಸಂಖ್ಯೆಯ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾಲೇ ಪದೇ ಪದೇ ಘೋಷಣೆ ಹಾಕಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ವಿಜಯಸಂಕೇತ ತೋರಿ ಕಾರಿನಿಂದ ಹೊರಟರು.
ಇನ್ನು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಬಂದಿದ್ದ ಸಿದ್ದರಾಮಯ್ಯ ಅಲ್ಲಿಯೇ ಊಟ ಮಾಡಿದರು. ಈ ವೇಳೆ ಶಾಮನೂರು ಶಿವಶಂಕರಪ್ಪರ ಜೊತೆ ಸಮಾಲೋಚನೆ ನಡೆಸಿದರು. ಸುಮಾರು ಹತ್ತು ನಿಮಿಷಗಳ ಕಾಲ ಚರ್ಚೆ ನಡೆಸಿದರು. ಈ ವೇಳೆಯೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸೆಲ್ಫಿ ತೆಗೆಸಿಕೊಳ್ಳಲು ತಾ ಮುಂದು ನಾ ಮುಂದು ಅಂತಾ ಮುಗಿಬಿದ್ದರು. ಇದಾದ ಬಳಿಕ ಹೊರಗಡೆ ಬಂದ ಸಿದ್ದರಾಮಯ್ಯ ಅವರಿಗೆ ಮುಂದಿನ ಸಿಎಂ ಸಿದ್ದರಾಮಯ್ಯ ಅಂತಾ ಕೂಗಿದರು. ಈ ವೇಳೆ ಕೆಲವರು ಹೌದು ಹುಲಿಯಾ ಅಂತಾಲೂ ಘೋಷಣೆ ಹಾಕಿದರು.
ಭೈರತಿ ಬಸವರಾಜ್ ಖಜಾಂಚಿ
ಇನ್ನು ಬಾಯ್ತಪ್ಪಿದ ಸಿದ್ದರಾಮಯ್ಯ ಅವರು 75 ನೇ ಜನುಮದಿನಾಚರಣೆಯ ಸಮಿತಿ ಖಜಾಂಚಿ ಭೈರತಿ ಬಸವರಾಜ್ ಎಂದು ಎರಡರಿಂದ ಮೂರು ಬಾರಿ ಹೇಳಿದರು. ಈ ವೇಳೆ ಅಲ್ಲಿದ್ದವರು ಗಮನಕ್ಕೆ ತಂದಾಗ ಸಿದ್ದರಾಮಯ್ಯ ಅವರು, ಭೈರತಿ ಬಸವರಾಜ್ ಅಲ್ಲ, ಭೈರತಿ ಸುರೇಶ್ ಎಂದು ಹೇಳಿದರು.
ದಾವಣಗೆರೆ ಪ್ರವಾಸದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದೆ. ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ರಾಮಪ್ಪ, ಮಾಜಿ ಶಾಸಕ ರಾಜಣ್ಣ, ಮಾಜಿ ಸಂಸದ ಚಂದ್ರಪ್ಪ ಸೇರಿದಂತೆ ಹಲವರು ಹಾಜರಿದ್ದರು. pic.twitter.com/Iu0kn9gUOV
— Siddaramaiah (@siddaramaiah) July 12, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243