ದಿನದ ಸುದ್ದಿ

ಮಾಜಿ ಸಿಎಂ ಆದ್ರೂ ಕಡಿಮೆಯಾಗಿಲ್ಲ ಸಿದ್ದು ಫೇಮ್

Published

on

ಮೈಸೂರಿನ ಡಿಆರ್‍ಸಿ ಚಿತ್ರಮಂದಿರದಲ್ಲಿ ಯುವತಿಯೊಬ್ಬರು ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು.

ಸುದ್ದಿದಿನ ಡೆಸ್ಕ್: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೈಲಿ ಈಗ ಹೇಳಿಕೊಳ್ಳುವಂತ ದೊಡ್ಡ ಅಧಿಕಾರವಿಲ್ಲ. ಆದರೂ, ಅವರಿಗಿರುವ ಫೇಮ್ ಸ್ವಲ್ಪವೂ ಕೂಡ ಕಡಿಮೆಯಾಗಿಲ್ಲ.
ಮೈಸೂರಿನ ಡಿಆರ್‍ಸಿ ಚಿತ್ರಮಂದಿರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನೋಡಲು ಬಂದಿದ್ದ ಸಿದ್ದರಾಮಯ್ಯ ಅವರು ಒಬ್ಬ ಜನಪ್ರಿಯ ಸೆಲಬ್ರಿಟಿಗೆ ಸಿಗುವಷ್ಟೇ ಸ್ವಾಗತ ಕಾದಿತ್ತು.
ಸಾಮಾನ್ಯವಾಗಿ ಯುವ ಸಮೂಹದಲ್ಲಿ ರಾಜಕಾರಣಿಗಳ ಬಗ್ಗೆ ಒಲವು ಅಷ್ಟಕ್ಕಷ್ಟೆ. ಆದರೆ, ಸಿದ್ದರಾಮಯ್ಯ ಅವರ ವಿಷಯದಲ್ಲಿ ಹಾಗಲ್ಲ, ತಮ್ಮ ಎಂದಿನ ಸ್ಟೈಲ್‍ನಲ್ಲಿ ಸಿದ್ದರಾಮಯ್ಯ ಅವರು ಬಿಳಿ ಪಂಚೆ, ಸಿಲ್ಕ್ ಶರ್ಟ್ ಹಾಗೂ ಶಲ್ಯದಲ್ಲಿ ಡಿಆರ್‍ಸಿ ಚಿತ್ರಮಂದಿರದ ಆವರಣ ಪ್ರವೇಶಿಸುತ್ತಿದ್ದಂತೆಯೇ ಕಿಕ್ಕಿರಿದ ಯುವಕ, ಯುವತಿಯರು ಸಿದ್ದರಾಮಯ್ಯ ಅವರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದರು.
ಚಿತ್ರಮಂದಿರಕ್ಕೆ ಬಂದಿದ್ದ ಹೈ ಕ್ಲಾಸ್ ಜನರು, ಮಕ್ಕಳು ಕೂಡ ಸೆಲ್ಫಿಗಾಗಿ ಹಂಬಲಿಸುತ್ತಿದ್ದರು. ಸಿದ್ದರಾಮಯ್ಯ ಅವರು ಹಮ್ಮು ಬಿಮ್ಮು ಇಲ್ಲದೆ ಬಂದವರನ್ನು ಆತ್ಮೀಯವಾಗಿ ಮಾತನಾಡಿಸಿ ಸೆಲ್ಫಿಗೆ ಪೋಸ್ ಕೊಟ್ಟರು.
ಇನ್ನು ಚಿತ್ರಮಂದಿರದೊಳಗೆ ಹೋಗುತ್ತಿದ್ದಂತೆಯೇ ಸೀಟ್‍ನಲ್ಲಿ ಕುಳಿತಿದ್ದ ಅಸಂಖ್ಯಾತ ಪ್ರೇಕ್ಷಕರ ವರ್ಗ ಎದ್ದುನಿಂತು ಸಿದ್ದರಾಮಯ್ಯ ಅವರಿಗೆ ಗೌರವ ಸೂಚಿಸಿದರು. ಇನ್ನೂ ಕೆಲವರು ಅವರ ಬಳಿ ಓಡಿ ಬಂದು ಕೈ ಕುಲುಕಿದರು.
ಅಂದಹಾಗೆ ರಿಶಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾವನ್ನು ಸಿದ್ದರಾಮಯ್ಯ ಅವರು ಬಹಳ ಮೆಚ್ಚಿಕೊಂಡಿದ್ದಾರೆ. ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯುವ ಸಿನಿಮಾ ಇದು ಎಂದು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version