ರಾಜಕೀಯ
ಸಿದ್ದು ವಿದೇಶ ಪ್ರಯಾಣ: ರಾಜ್ಯ ರಾಜಕೀಯದಲ್ಲಿ ತಳಮಳ
ಸುದ್ದಿದಿನ ಡೆಸ್ಕ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸು ಎಷ್ಟು ಎಂಬುದು ಹಲವು ಬಾರಿ ಸಾಬೀತಾಗಿದೆ. ಅವರ ಪ್ರತಿಯೊಂದು ನಡೆಯೂ ರಾಜಕೀಯದ ತಿರುವಿಗೆ ಕಾರಣವಾಗುತ್ತಿವೆ.
ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕುಟುಂಬದ ಜೊತೆ 13 ದಿನಗಳ ಕಾಲ ವಿದೇಶ ಪ್ರಯಾಣ ಬೆಳೆಸಲಿದ್ದಾರೆ. ಸಿದ್ದು ವಿಶ್ರಾಂತಿ ಕಾರಣಕ್ಕೆ ವಿದೇಶಿ ಪ್ರಯಾಣ ತೆರಳುತ್ತಿದ್ದರೂ ರಾಜ್ಯ ರಾಜಕೀಯದಲ್ಲಿ ತಳಮಳ ಶುರುವಾಗಿದೆ.
ಹೌದು, ಸಚಿವ ಸಂಪುಟ ವಿಸ್ತರಣೆ ಕಸರತ್ತು ಆರಂಭವಾಗಿದ್ದು, ಈಗಾಗಲೇ ಲಾಬಿಗಳು ಶುರುವಾಗಿವೆ. ಇಂತಹ ಸಂದರ್ಭದಲ್ಲಿ ಪ್ರಭಾವಿ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿದೇಶಿ ಪ್ರಯಾಣ ತೆರಳುತ್ತಿರುವುದು ಶಾಸಕರಲ್ಲಿ ಆತಂಕ ಮೂಡಿಸಿದೆ.
ಜತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಮತ್ತೆ ಯಾವ ಸಮಸ್ಯೆ ಎದುರಾಗುತ್ತೋ ಎಂಬ ಆತಂಕ ಎದುರಾಗಿದೆ. ಇನ್ನು ಸಿದ್ದರಾಮಯ್ಯ ಅವರು ಕುಟುಂಬದ ಜತೆ ವಿದೇಶ ಪ್ರಯಾಣ ಬೆಳಸಲಿದ್ದಾರೆ ಎಂದು ಹೇಳಲಾಗಿದ್ದರೂ ಕೆಲವು ಶಾಸಕರು ಕೂಡ ಹೋಗಲಿದ್ದಾರೆ ಎಂಬ ವದಂತಿ ಹಬ್ಬಿದೆ. ಇದರಿಂದ ಮತ್ಯಾಯ ರಾಜಕೀಯ ತಿರುವು ಪಡೆದುಕೊಳ್ಳುತ್ತೆದೆಯೋ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಎದ್ದಿದೆ.
ಯಡಿಯೂರಪ್ಪ ಆರೋಪ ಮುಂದುವರಿಕೆ !
ಇನ್ನು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪ ಮುಂದುವರಿಸಿದ್ದಾರೆ. ರಾಜ್ಯ ಸಮ್ಮಿಶ್ರ ಸರ್ಕಾರದ ಕಚ್ಚಾಟಗಳು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ದಾರಾವಾಹಿಯಂತೆ ಬಿತ್ತರವಾಗುತ್ತಿವೆ ಎಂದು ಆಪಾದಿಸಿದ್ದಾರೆ.