ರಾಜಕೀಯ
ನಾಗಪುರದಲ್ಲಿ ಸಚಿವರ ರಾಜೀನಾಮೆ ಬಗ್ಗೆ ಸಿದ್ದು ಪ್ರಸ್ತಾಪ
ಸುದ್ದಿದಿನ ಡೆಸ್ಕ್ : ನಾಗಪುರದಲ್ಲಿ ಇಂದು ನಡೆಯುತ್ತಿರುವ ಎಐಸಿಸಿ ಕಾರ್ಯಕಾರಿಣಿ ಸಭೆಯ ಸಂಧರ್ಭದಲ್ಲಿ ಸಚಿವರ ರಾಜೀನಾಮೆ ಬಗ್ಗೆ ಮಾಜಿ ಸಿ.ಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡಲಿದ್ದಾರೆ.
ರಾಜೀನಾಮೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಚಿವರ ಬಗ್ಗೆ ಹೈಕಮಾಂಡ್ ಗೆ ಮಾಹಿತಿ ನೀಡಲಿರುವ ಸಿದ್ದರಾಮಯ್ಯ ಅವರು ಅತೃಪ್ತ ಶಾಸಕರು, ಹಿರಿಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಅಂದ್ರೆ ಕೆಲ ಸಚಿವರ ರಾಜೀನಾಮೆ ಅಗತ್ಯ ಎಂದಿದ್ದಾರೆ. ಗೊಂದಲದ ಗೂಡಾದ ಸಂಪುಟ ಪುನರ್ ರಚನೆ ನಾಗಪುರದಲ್ಲಿ ಪರಿಹಾರ ಕಾಣುತ್ತಾ ಸಂಪುಟ ಬಿಕ್ಕಟ್ಟು ? ಎಂಬ ಪ್ರಶ್ನೆಗೆ ಉತ್ತರ ಇಂದು ಸಿಗಲಿದೆಯಾ ಕಾದು ನೋಡಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401