ರಾಜಕೀಯ

ಧರ್ಮಸಿಂಗ್, ಖರ್ಗೆ ಅಪರೂಪದ ನಾಯಕರು: ಸಿದ್ದು ಹೇಳಿಕೆ

Published

on

ಸುದ್ದಿದಿನ ಡೆಸ್ಕ್: ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅಪರೂಪದ ರಾಜಕಾರಣಿಗಳು. ಧರ್ಮಸಿಂಗ್ ಬದುಕಿದ್ದರೆ ಮತ್ತೊಮ್ಮೆ ಗೆಲವು ಸಾಗಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿರಿಯ ರಾಜಕಾರಣಿಗಳನ್ನು ನೆನಪಿಸಿಕೊಂಡರು.

ಧರ್ಮಸಿಂಗ್ ರಾಜಕಾರಣದಲ್ಲಿ ಅಜಾತಶತ್ರು ಎನಿಸಿಕೊಂಡಿದ್ದರು. ಅವರು ಅಷ್ಟು ಬೇಗ ಸಾವನ್ನಪ್ಪುತ್ತಾರೆ ಎಂದುಕೊಂಡಿರಲಿಲ್ಲ. ಅವರು ಬದುಕಿದ್ದರೆ ಈ ಬಾರಿಯ ಚುನಾವಣೆಯಲ್ಲಿ ಖಂಡಿತವಾಗಿ ಜಯಗಳಿಸುತ್ತಿದ್ದರು. ಅವರ ಸಾವಿನಿಂದ ಪಕ್ಷಕ್ಕೆ ನಷ್ಟವಾಗಿದೆ. ಅವರು ಅಪರೂಪದ ರಾಜಕಾರಣಿ ಎಂದು ಸ್ಮರಿಸಿದರು.

Title: Siddaramaiah remember dharam singh

Leave a Reply

Your email address will not be published. Required fields are marked *

Trending

Exit mobile version