ದಿನದ ಸುದ್ದಿ
ಸಿದ್ದು ಶಾಪಿಂಗ್ ..!
ಸುದ್ದಿದಿನ ಡೆಸ್ಕ್ :ಮೈಸೂರು ವರುಣಾ ವಿಧಾನಸಭೆ ಕ್ಷೇತ್ರದ ಹೊಸಕೋಟೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಮೈಸೂರು ನಗರದ ದೇವರಾಜ ಅರಸು ರಸ್ತೆಗೆ ತೆರಳಿ ಸಣ್ಣ ಶಾಪಿಂಗ್ ಮಾಡಿದರು.
ನೈಕ್ ಮಳಿಗೆಗೆ ಭೇಟಿ ನೀಡಿದ ಅವರು, ಮುಂಜಾನೆಯ ವಾಯು ವಿಹಾರಕ್ಕೆ ಅಗತ್ಯವಾದ ಬಟ್ಟೆಗಳು ಹಾಗೂ ಶೂ ಖರೀದಿ ಮಾಡಿದರು. ಈ ಸಂದರ್ಭದಲ್ಲಿ ಪುತ್ರ ಶಾಸಕ ಡಾ. ಯತೀಂದ್ರ ಹಾಗೂ ಸಂಸದ ಧ್ರುವನಾರಾಯಣ ಅವರು ಜೊತೆಗಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401