ರಾಜಕೀಯ
ಮಹದಾಯಿ ತೀರ್ಪು ಪೂರ್ಣ ಸಮಾಧಾನ ತಂದಿಲ್ಲ | ಸಿದ್ದು
ಸುದ್ದಿದಿನ ಡೆಸ್ಕ್ | ರಾಜ್ಯದ ಜನತೆಗೆ 72 ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು.71 ವರ್ಷ ಪೂರೈಸಿದ್ದೇವೆ. ಬಹಳ ದೂರ ಸಾಗಿದ್ದೇವೆ. ಅಭಿವೃದ್ದಿಯಾಗಿದೆ. ಆದ್ರೆ ಇನ್ನೂ ಆಗಬೇಕಿದೆ. ಸ್ವಾತಂತ್ರ ತಂದು ಕೊಟ್ಟ ಗಾಂಧಿಜಿ, ನೆಹರು, ವಲ್ಲಭಬಾಯಿ ಪಟೇಲ್ ಸೇರಿ ಬಹಳ ಮಹನೀಯರಿಗೆ ಧನ್ಯವಾದಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನತೆಗೆ ಶುಭಾಶಯ ತಿಳಿಸಿದರು.
ಮಹದಾಯಿ ತೀರ್ಪು ವಿಚಾರ, ಒಂದು ರೀತಿ ಭಾಗಶಃ ನಮಗೆ ಸಮಾಧಾನ ತಂದಿದ್ದರೂ, ಪೂರ್ಣ ಸಮಾಧಾನ ಸಿಕ್ಕಿಲ್ಲ. ವಿದ್ಯುತ್ ಉತ್ಪಾದನೆಗೆ ನೀರು ಕೊಟ್ಟಿದ್ದಾರೆ. ಆದ್ರೆ ಅದೂ ಕೂಡ ಗೋವಾಕ್ಕೆ ಹೋಗುತ್ತೆ. ಹಾಗಾಗಿ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಬೇಕು. ನಮ್ಮ ಸರ್ಕಾರ ಇದ್ದಾಗ ವಕೀಲರು ಸಮರ್ಥವಾದ ವಾದ ಮಂಡಿಸಿದ್ದರು. ಸಂಪುಟ ವಿಸ್ತರಣೆ ವಿಚಾರ ನನಗೆ ಗೊತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಇದೆ. ಕೆಲ ಉಪಚುನಾವಣೆಗಳಿವೆ ಅದಾಗ್ಲಿ ಮೊದಲು ಆಮೇಲೆ ಸಚಿವ ಸಂಪುಟದ ವಿಸ್ತರಣೆಯ ಮಾತು. ಹಾಗೂ ಜಾತಿ ಸಮೀಕ್ಷೆ ಹಾಗೂ ಇತರೆ ವಿಚಾರಗಳು ಸೇರಿ ಎಲ್ಲದ್ದಕ್ಕೂ ಚುನಾವಣೆ ಬಳಿಕ ಅನ್ನೋ ಮಾತನ್ನ ಹೇಳಿದರು.
ಮಹದಾಯಿ ನ್ಯಾಯಾಧೀಕರಣ ತೀರ್ಪು ವಿಚಾರ
ತೀರ್ಪು ನಮಗೆ ಬಾಗಶಃ ಸಮಾಧಾನ ತಂದಿದೆ. ಪೂರ್ಣ ಸಮಾಧಾನವಾಗಿಲ್ಲ. 36.5 ಟಿಎಂಸಿ ನೀರು ಕೇಳಿದ್ದೆವು, 13.5 ಟಿಎಂಸಿ ನೀರು ಮಾತ್ರ ಕೊಟ್ಟಿದ್ದಾರೆ. ಕುಡಿಯುವ ನೀರಿಗೆ 5.4 ಟಿಎಂಸಿ ನೀರು ಸಿಗಲಿದೆ. ಉಳಿದ ನೀರು ವಿದ್ಯುತ್ ಉತ್ಪಾದನೆಗೆ ಸಿಗಲಿದೆ. ಆ ನೀರು ಉತ್ಪಾದನೆ ಬಳಿಕ ಮಹದಾಯಿಗೇ ಹೋಗಲಿದೆ.ಅದರ ಉಪಯೋಗ ನಮಗೆ ಸಿಗಲ್ಲ. ಐದು ವರ್ಷ ನಮ್ಮ ಸರ್ಕಾರ ಹೋರಾಟ ಮಾಡಿತ್ತು.ನಮ್ಮವಕೀಲರು ಸಮರ್ಥವಾಗಿ ನಿಭಾಯಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401