ರಾಜಕೀಯ
ಜನಾದೇಶದ ಬಲದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿಲ್ಲ : ಸಿದ್ದರಾಮಯ್ಯ
ಸುದ್ದಿದಿನ, ಬೆಂಗಳೂರು : ಜನಾದೇಶದ ಬಲದಿಂದ ಬಿ.ಎಸ್.ಯಡಿಯೂರಪ್ಪ ಅವರು ಎಂದೂ ಮುಖ್ಯಮಂತ್ರಿಯಾಗಿಲ್ಲ. ಈ ಬಾರಿ ಕೂಡಾ ಅವರ ಮೇಲೆ ರಾಜ್ಯದ ಜನತೆಗೆ ವಿಶ್ವಾಸ ಇಲ್ಲ. ಅಕ್ರಮ ಮಾರ್ಗಗಳ ಮೂಲಕ ಸದನದ ವಿಶ್ವಾಸ ಸಂಪಾದನೆ ಮಾಡಲು ಹೊರಟಿರುವ ಅವರ ಪ್ರಯತ್ನದಲ್ಲಿ ಯಶಸ್ಸು ಗಳಿಸಿದರೂ ಅದು ತಾತ್ಕಾಲಿಕ. ಈ ಸರ್ಕಾರ ಬಹಳ ದಿನ ಬಾಳಲಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ, ಅವರಿಗೆ ಅಭಿನಂದನೆಗಳು. ಮುಖ್ಯಮಂತ್ರಿಯಾಗಿ ತಮ್ಮ ಅವಧಿ ಪೂರ್ಣಗೊಳಿಸಬೇಕೆಂಬುದು ನಮ್ಮ ಆಶಯ. ಆದರೆ,ಎಷ್ಟು ದಿನ ಅವರು ಅಧಿಕಾರದಲ್ಲಿ ಇರುತ್ತಾರೋ ಮುಂದೆ ನೋಡೋಣ ಎಂದಿದ್ದಾರೆ.
ಮೈತ್ರಿ ಸರ್ಕಾರ ಜನ ಮೆಚ್ಚುಗೆಯ ಆಡಳಿತ ನೀಡಿದೆ. ಜನಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ನನ್ನ ಕೊನೆಯ ಬಜೆಟ್‌ನಲ್ಲಿ ಖುಷ್ಕಿ ಭೂಮಿಯ ರೈತರಿಗೆ ರೂ.10 ಸಾವಿರ ನೀಡುವ ಯೋಜನೆ ತಂದಿದ್ದೆವು. ನೇಕಾರರ ಸಾಲ ಮನ್ನಾ ಕೂಡಾ ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಲಾಗಿತ್ತು.
ಅದನ್ನೇ ಯಡಿಯೂರಪ್ಪರವರು ಪುನರುಚ್ಚಾರ ಮಾಡಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243