ರಾಜಕೀಯ

ಮೋದಿಯವರೇ 5 ವರ್ಷದಲ್ಲಿ ಒಮ್ಮೆಯಾದರೂ ‘ರಾಮ ಮಂದಿರ’ ನೆನಪಾಗಲಿಲ್ಲವೇ ? : ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ, ಬೆಂಗಳೂರು : ನರೇಂದ್ರ ಮೋದಿಯವರು ತಮ್ಮ 5 ವರ್ಷಗಳ ವೈಫಲ್ಯವನ್ನು ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಹೂತಿಟ್ಟು, ಅಲ್ಲಿ ನೆಮ್ಮದಿಯಾಗಿದ್ದ ರಾಮನನ್ನು ಕರೆದುಕೊಂಡು ಚುನಾವಣಾ ಪ್ರಚಾರಕ್ಕೆ ಹೊರಟಿದ್ದಾರೆ‌ ಎಂದು ಮಾಜಿ ಮುಖ್ಯಮಂತ್ರಿ ‌ಸಿದ್ದರಾಮಯ್ಯ ವ್ಯಂಗವಾಡಿದ್ದಾರೆ.

ಬೆಂಗಳೂರಿನ ರಾಜಾಜಿ ನಗರದಲ್ಲಿ ರೋಡ್ ಶೋ ನಡೆಸಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದ ಅವರು, ನರೇಂದ್ರ ‌ಮೋದಿ ಅವರೇ, ಇನ್ನೆಷ್ಟು ಕಾಲ ಜನರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುತ್ತೀರ? 5 ವರ್ಷದಲ್ಲಿ ಒಮ್ಮೆಯಾದರೂ ಮಂದಿರ ನೆನಪಾಗಿರಲಿಲ್ಲವೇ? ಎಂದು ಕಿಡಿಕಾರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version