ರಾಜಕೀಯ

ಜಾತ್ಯಾತೀತರೆಲ್ಲ ಸೇರಿ ಕೋಮುವಾದಿ ಬಿಜೆಪಿಯನ್ನು ಸೋಲಿಸೋಣ : ಸಿದ್ದರಾಮಯ್ಯ

Published

on

ಸುದ್ದಿದಿನ,ಬೆಂಗಳೂರು : ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಪ್ರಧಾನಿ ಮೋದಿ ಆಡಳಿತದಲ್ಲಿ ಆತಂಕದಿಂದ ಬದುಕು ನಡೆಸುತ್ತಿದೆ. ಆದ ಕಾರಣ ನಾವು ಈ ಕೋಮುವಾದಿ ಪಕ್ಷ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸ ಬೇಕು, ಅದೇ ನಮ್ಮ ಗುರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಬೆಂಗಳೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತಿಕೂಟ ಜಟಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ರೈತರ, ದಲಿತರ, ಮಹಿಳೆಯರ ಪರವಾಗಿ ಸಂವಿಧಾನ ಬದ್ಧವಾಗಿ, ಆಡಳಿತ ನಡೆಸಿರುವ ಕಾಂಗ್ರಸ್ ಪ್ರಜಾಪ್ರಭುತ್ವದ ಉಳಿವಿಗಾಗಿ‌ ಕೆಲಸ ಮಾಡುತ್ತಲೇ ಇದೆ. ನಾವು ಅಧಿಕಾರದಲ್ಲಿದ್ದಾಗ ಜನಪರವಾದ ಹಲವು ಕಾರ್ಯಗಳು ಜನತೆಯ ವಿಶ್ವಾಸಗಳಿವೆ. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾವೂ ಸಹ ಆ ಯೋಜನೆಗಳನ್ನೇ ಮುಂದುವರಿಸಿ ಕೊಂಡು ಬರುತ್ತಿದೆ ಎಂದರು.

ಭ್ರಷ್ಟ, ಕೋಮುವಾದಿ ಬಿಜೆಪಿ‌ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಈ ಬಾರಿ ರಾಹುಲ್ ಗಾಂಧಿಯವರು ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.

ಸುದ್ದಿದಿನ‌‌‌.ಕಾಂ|ವಾಟ್ಸಾಪ್|9986715401

Trending

Exit mobile version