ರಾಜಕೀಯ

ಜಾತ್ಯತೀತರೆಲ್ಲರೂ ಸಂಘಟಿತರಾದರೆ ಕೋಮುವಾದಿಗಳ ಆಟ ನಡೆಯದು : ಸಿದ್ದರಾಮಯ್ಯ

Published

on

ಸುದ್ದಿದಿನ, ಮಂಗಳೂರು : ಜಗತ್ತಿನ ಯಾವ ಧರ್ಮವೂ ಮತ್ತೊಂದು ಧರ್ಮವನ್ನು ದ್ವೇಷಿಸಲು ಹೇಳುವುದಿಲ್ಲ, ಕೊಲ್ಲುವ, ಕಡಿಯುವ, ಒಡೆಯುವ, ಮುರಿಯುವ, ಬೆಂಕಿ ಹಚ್ಚುವ ಭಾಷೆಯಲ್ಲಿ ಮಾತನಾಡುವುದಿಲ್ಲ. ಆ ಭಾಷೆಯಲ್ಲಿ ಮಾತನಾಡುವವರು ನಿಜವಾದ ಧರ್ಮವಿರೋಧಿಗಳು. ಧರ್ಮದ ಭಾಷೆ ಪ್ರೀತಿಯೇ ಹೊರತು ದ್ವೇಷ ಅಲ್ಲ ಎಂದು ಮಂಗಳೂರಿನಲ್ಲಿ ಇಂದು ಆಯೋಜಿಸಿದ್ದ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ಬೆಳ್ಳಿ ಹಬ್ಬ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಂತರ ಮಾತನಾಡಿದ ಅವರು ರಾಜಕೀಯವಾಗಿ ಎದುರಿಸಲಿಕ್ಕಾಗದವರು ಜಾತಿ-ಧರ್ಮಗಳ ನಡುವೆ ಕಿಚ್ಚು ಹಚ್ಚುತ್ತಿದ್ದಾರೆ. ಮನುಷ್ಯನ ಮುಗ್ಧ ಧಾರ್ಮಿಕ ನಂಬಿಕೆ- ಅಜ್ಞಾನವನ್ನು ರಾಜಕೀಯದ ಗುಪ್ತ ಅಜೆಂಡಾಗಳಿಗಾಗಿ ದುರುಪಯೋಗ ಪಡಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ.ಇದನ್ನು ಜಾತ್ಯತೀತರೆಲ್ಲ ಕೂಡಿ ವಿರೋಧಿಸಬೇಕಾಗುತ್ತದೆ ಎಂದರು.

ಸಮಾಜದಲ್ಲಿ ಕೋಮುವಾದಿಗಳ ಸಂಖ್ಯೆ ಕಡಿಮೆ,ಜಾತ್ಯತೀತರ ಸಂಖ್ಯೆ ಹೆಚ್ಚು. ಆದರೆ ಅವರ ಆರ್ಭಟ ಹೆಚ್ಚು, ನಮ್ಮಲ್ಲಿ ಬಿಕ್ಕಟ್ಟು ಹೆಚ್ಚು. ಜಾತ್ಯತೀತರೆಲ್ಲರೂ ಸಂಘಟಿತರಾದರೆ ಕೋಮುವಾದಿಗಳ ಆಟ ನಡೆಯದು ಎಂದು ಕರೆ ನೀಡಿದರು.

ಇದನ್ನೂ ಓದಿ

https://suddidina.com/political-news/siddaramaiah-tweet-about-budget-2019/

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version