ದಿನದ ಸುದ್ದಿ

ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಕಂಡು ಮಾತು ಹೊರಡುತ್ತಿಲ್ಲ, ನಿಮಗೆ ನನ್ನ ಧನ್ಯವಾದಗಳು : ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು : ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದು ಮನೆಗೆ ಮರಳುತ್ತಿದ್ದೇನೆ. ಹಿಂದಿನಂತೆ ಕೆಲಸ ಕಾರ್ಯಗಳನ್ನು ಕೈಗೊಳ್ಳುವಷ್ಟು ನನ್ನ ಆರೋಗ್ಯ ಸದೃಢವಾಗಿದೆ. ಯಾವ ಆತಂಕವೂ ಬೇಡ. ನಾನು ಮೊದಲಿನಂತೆ ಸಕ್ರಿಯವಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯಾದ್ಯಂತ ಅಭಿಮಾನಿಗಳು ನನ್ನ ಆರೋಗ್ಯ ಸುಧಾರಣೆಯಾಗುವಂತೆ ಹರಕೆ, ಪೂಜೆಗಳನ್ನು ಸಲ್ಲಿಸಿದ್ದಾರೆ, ಕೆಲವರು ಆಸ್ಪತ್ರೆಗೆ ಬಂದು ಪ್ರಸಾದವನ್ನೂ ನೀಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಕಂಡು ಮಾತು ಹೊರಡುತ್ತಿಲ್ಲ. ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು ಎಂದರು.

ಜನಸೇವೆಯಲ್ಲಿರುವ ವ್ಯಕ್ತಿ ಇದಕ್ಕಿಂತ ಹೆಚ್ಚಿನದನ್ನು ಏನು ನಿರೀಕ್ಷಿಸಲು ಸಾಧ್ಯ? ಈ ವೇಳೆ ವಿವಿಧ ಸಮುದಾಯಗಳ ಮಠಾಧೀಶರು ಹಾಗೂ ಪಕ್ಷಾತೀತವಾಗಿ ಹಲವು ನಾಯಕರು ನನ್ನನ್ನು ಭೇಟಿಯಾಗಿ ಧೈರ್ಯತುಂಬಿ, ಗುಣಮುಖರಾಗುವಂತೆ ಹಾರೈಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಹೆಚ್ಚಿನ ಕಾಳಜಿ ವಹಿಸಿ ನನ್ನ ಆರೈಕೆ ಮಾಡಿದ್ದಾರೆ, ಮಾನಸಿಕವಾಗಿ ಧೈರ್ಯ ತುಂಬಿದ್ದಾರೆ. ಅವರೆಲ್ಲರ ಸೇವೆಗೆ ನಾನು ಆಭಾರಿ ಎಂದರು.

ಮನುಷ್ಯತ್ವವನ್ನು ಮೀರಿದ ಸಿದ್ಧಾಂತ ಜಗತ್ತಿನಲ್ಲೇ ಇಲ್ಲ. ಕಷ್ಟಕಾಲದಲ್ಲಿ ಜೊತೆಯಾದವರೆಲ್ಲರೂ ನಾನು ಕೃತಜ್ಞ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version