ದಿನದ ಸುದ್ದಿ

ವೀರಯೋಧ ಅಭಿನಂದನ್ ಕೆಚ್ಚೆದೆಗೆ ನನ್ನದೊಂದು ಗೌರವದ ಸಲಾಂ : ಸಿದ್ದರಾಮಯ್ಯ

Published

on

ಸುದ್ದಿದಿನ ಡೆಸ್ಕ್ : ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಬಂಧನದಲ್ಲಿದ್ದಾರೆ. ಪಾಕಿಸ್ತಾನ ಸರ್ಕಾರ ಅವರ ಬಂಧನದಲ್ಲಿರುವ ಕೆಲವು ವಿಡಿಯೋ ಗಳನ್ನು ನಿನ್ನೆ ರಿಲೀಸ್ ಮಾಡಿತ್ತು.

ಭಾರತೀಯರು ಅಭಿನಂದನ್ ಅವರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಬರಲಿ ಎಂದು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಟ್ವೀಟ್ ಮಾಡಿದ್ದಾರೆ.

“ಪಾಕಿಸ್ತಾನ ಸೆರೆಹಿಡಿದಿರುವ ಭಾರತದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಕೇಂದ್ರ ಸರ್ಕಾರ ಸುರಕ್ಷಿತವಾಗಿ ವಾಪಸು ಕರೆತರಬೇಕೆಂಬ ದೇಶದ ಒಕ್ಕೊರಲ ಕೂಗಿಗೆ ನಾನೂ ದನಿಗೂಡಿಸುತ್ತೇನೆ. ವೀರಯೋಧ ಅಭಿನಂದನ್ ಕೆಚ್ಚೆದೆಗೆ ನನ್ನದೊಂದು ಗೌರವದ ಸಲಾಂ. ಜೈಹಿಂದ್,ಜೈಜವಾನ್.”

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version