/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಜನಾರ್ಧನ ರೆಡ್ಡಿಯವರೇ ನಿಮ್ಮ‌ ಪಾಪಗಳಿಗಾಗಿ‌ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ : ಸಿದ್ದು ಹೃದಯಸ್ಪರ್ಶಿ ನುಡಿ

Published

on

ಸುದ್ದಿದಿನ ಡೆಸ್ಕ್ : ಬಳ್ಳಾರಿ ಜಿಲ್ಲೆಯ ಅನಿರೀಕ್ಷಿತ ಚುನಾವಣೆ ಎದುರಾಗಿದ್ದು ನವೆಂಬರ್ 3 ರಂದು ಮತದಾನ ನಡೆಯಲಿದೆ. ಇದರ ಮದ್ಯೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ರಾಜ್ಯ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ, ಅದು ಇನ್ನೊಂದು ರೂಪವನ್ನು ಪಡೆದು ವಿವಾದಗಳನ್ನು, ವಯಕ್ತಿಕ ವಿಷಯವನ್ನು ಟೀಕಿಸುವ ಮಟ್ಟಿಗೆ ತಾರಕಕ್ಕೆ ಎರಿದೆ, ಇದರ ಮದ್ಯೆ ಗಾಲಿ ಜನಾರ್ದನ ರೆಡ್ಡಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಮಯ್ಯ ಬಗ್ಗೆ ಮಾತನಾಡಿರುವ ಹೇಳಿಕೆ ಬಾರಿ ಕೋಲಾಹಲ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಬಾರಿ ಆಕ್ರೋಶ ವ್ಯಕ್ತ ವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದು ಕೂಡ ಮುಂದುವರೆದ ಸಿದ್ದರಾಮಯ್ಯ ಟ್ವಿಟರ್ ವಾರ್ ನಲ್ಲಿ ಸಿದ್ದರಾಮಯ್ಯ ಅವರು ಜನಾರ್ಧನ್ ರೆಡ್ಡಿಗೆ ಮತ್ತೊಂದು ಟಾಂಗ್ ಕೊಟ್ಟಿದ್ದಾರೆ.

“ನನ್ನ ಮಗನ ಸಾವು ನನಗೆ ದೇವರು‌ಕೊಟ್ಟ ಶಿಕ್ಷೆ‌‌
ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ಆದರೆ ನಿಮ್ಮ‌ ಪಾಪಗಳಿಗಾಗಿ‌ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ” ಎಂಬ ಹೃದಯಸ್ಪರ್ಶಿ ನುಡಿಯನ್ನು ಸಿದ್ದರಾಮಯ್ಯನವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಶ್ಲಾಗಿಸುತ್ತಾ “ಈ ಇದು ಬಿಜೆಪಿಯ ವಿಕೃತ ಮನಸ್ತಿತಿ ಮತ್ತು ಸೋಲಿನ ಹತಾಷೆ ತಿಳಿಸುತ್ತದೆ ಎಂದು ಟ್ವಿಟರ್, ಫೇಸ್ಬುಕ್ ಗಳಲ್ಲಿ ಜನರು ಈ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ”.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version