ದಿನದ ಸುದ್ದಿ
ನಾಳೆ ಕಾಂಗ್ರೆಸ್ ನಿಂದ ಇಡಿ ಕಚೇರಿಗೆ ಮುತ್ತಿಗೆ : ಡಿ.ಕೆ. ಶಿವಕುಮಾರ್
ಸುದ್ದಿದಿನ ಡೆಸ್ಕ್ : ನಾಳೆ ರಾಜ್ಯದ ಕೇಂದ್ರ ಸ್ಥಳಗಳಲ್ಲಿನ ಇಡಿ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿದಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹೆಸರಿನಲ್ಲಿ ಇಡಿ ವಿಚಾರಣೆಗೆ ಕರೆಯುವ ಮೂಲಕ ಅವರ ರಾಜಕೀಯ ಶಕ್ತಿ ಕುಗ್ಗಿಸುವ, ಗಾಂಧಿ ಕುಟುಂಬ ದೇಶಕ್ಕೆ ಮಾಡಿದ ಸೇವೆಯನ್ನು ಜನರ ಮನಸಿನಿಂದ ಅಳಿಸುವ ದುರುದ್ದೇಶದ ಹುನ್ನಾರ ನಡೆದಿದೆ. ಕಾಂಗ್ರೆಸ್ ಪಕ್ಷ ಹಾಗೂ ಸಮಸ್ತ ಕಾಂಗ್ರೆಸಿಗರು ಈ ಹುನ್ನಾರವನ್ನು ಖಂಡಿಸಬೇಕಿದೆ ಎಂದಿದ್ದಾರೆ.
ಸೋಮವಾರ ಬೆಳಗ್ಗೆ ಕೆಂಗಲ್ ಹನುಮಂತಯ್ಯ ರಸ್ತೆಯ ಲಾಲ್ ಬಾಗ್ ಗೇಟ್ ಬಳಿ ಎಲ್ಲರೂ ಸೇರಿ ಇಡಿ ಕಚೇರಿಗೆ ಮುತ್ತಿಗೆ ಹಾಕೋಣ. ಶಾಸಕರು, ಸಂಸದರು, ರಾಜ್ಯದಿಂದ ಬ್ಲಾಕ್ ಮಟ್ಟದವರೆಗಿನ ಎಲ್ಲಾ ನಾಯಕರು, ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು.ಈ ಮೂಲಕ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದ್ದಾರೆ.
ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಪ್ರಬಲ ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸಬೇಕಿದೆ. ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಶ್ರೀ @RahulGandhi ಅವರಿಗೆ ED ನೋಟಿಸ್ ನೀಡಿರುವುದನ್ನು ಖಂಡಿಸಿ, ಬೆಂಗಳೂರಿನಲ್ಲಿರುವ ED ಕಚೇರಿಗೆ ಮುತ್ತಿಗೆ ಹಾಕೋಣ. ಬನ್ನಿ, ಜೂನ್ 13ರಂದು ನಡೆಯಲಿರುವ ಐತಿಹಾಸಿಕ ಹೋರಾಟದಲ್ಲಿ ಭಾಗವಹಿಸಿ. pic.twitter.com/CH7rNV66Ge
— DK Shivakumar (@DKShivakumar) June 11, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243