ದಿನದ ಸುದ್ದಿ
ಜಪಾನ್ನಲ್ಲಿ ಜನಸಂಖ್ಯೆ ಪ್ರಮಾಣ ಗಣನೀಯ ಕುಸಿತ ; ದುಡಿಯುವ ವರ್ಗದಲ್ಲಿ ಮರಣ ಪ್ರಮಾಣ ಹೆಚ್ಚಳ
ಸುದ್ದಿದಿನ ಡೆಸ್ಕ್ : ಜಪಾನ್ನಲ್ಲಿ ಜನಸಂಖ್ಯೆ ಪ್ರಮಾಣ ಗಣನೀಯವಾಗಿ ಕುಸಿತವಾಗಿದೆ. ಜಪಾನ್ ಸರ್ಕಾರದ ಅಂಕಿ-ಅಂಶಗಳ ಪ್ರಕಾರ 2021ರಲ್ಲಿ 6 ಲಕ್ಷದ 44ಸಾವಿರದಷ್ಟು ಜನಸಂಖ್ಯೆ ಕುಸಿತಕಂಡಿದೆ.
ಸತತ 11ನೇ ವರ್ಷ ಜನಸಂಖ್ಯೆಯಲ್ಲಿ ಕುಸಿತವಾಗಿದ್ದು, 1950ರ ನಂತರ ಹೋಲಿಕೆ ಮಾಡಿದರೆ ಇದು ಅತ್ಯಂತ ಹೆಚ್ಚಿನ ಪ್ರಮಾಣದ ಕುಸಿತವಾಗಿದೆ ಎಂದು ವರದಿಯಾಗಿದೆ.
ಜಪಾನ್ನಲ್ಲಿ 12ಕೋಟಿ 27 ಲಕ್ಷದ 80 ಸಾವಿರ ನಾಗರಿಕರಿದ್ದು, ಇದಕ್ಕೂ ಹಿಂದಿನ ವರ್ಷ 6ಲಕ್ಷದ 18ಸಾವಿರದಷ್ಟು ಜನಸಂಖ್ಯೆ ಕುಸಿತವಾಗಿತ್ತು. 2021ರಲ್ಲಿ 8 ಲಕ್ಷದ 31ಸಾವಿರ ಜನನವಾಗಿದ್ದು, ಇದೇ ಅವಧಿಯಲ್ಲಿ 14 ಲಕ್ಷ ಮಂದಿ ಸಾವನ್ನಪ್ಪಿದ್ದರು.
15ರಿಂದ64ವರ್ಷದ ವಯೋಮಿತಿಯ ಕೆಲಸ ಮಾಡುವ ಜನಸಂಖ್ಯೆಯಲ್ಲೂ ಗಣನೀಯ ಕುಸಿತ ದಾಖಲಾಗಿದ್ದು, 5 ಲಕ್ಷದ 84ಸಾವಿರ ಮಂದಿ ಮೃತಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243