ದಿನದ ಸುದ್ದಿ
ದೇಶದಲ್ಲಿ ಅಂಗಾಂಗ ಕಸಿ ಗಣನೀಯ ಏರಿಕೆ
ಸುದ್ದಿದಿನ, ದೆಹಲಿ : ದೇಶದಲ್ಲಿ ಅಂಗಾಂಗ ದಾನ ಮತ್ತು ಅದರ ಕಸಿ ಸಂಬಂಧದ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವೀಯ ದೆಹಲಿಯಲ್ಲಿ ನಿನ್ನೆ ಪ್ರಗತಿ ಪರಾಮರ್ಶೆ ನಡೆಸಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಸೇರಿದಂತೆ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೇಶದಲ್ಲಿ 2013ಕ್ಕೂ ಮುನ್ನ ಐದು ಸಾವಿರಕ್ಕೂ ಕಡಿಮೆ ಇದ್ದ ಅಂಗಾಂಗ ಕಸಿ, 2022ರ ವೇಳೆಗೆ 15 ಸಾವಿರಕ್ಕೂ ಹೆಚ್ಚಾಗಿ ನಡೆದಿದೆ. ಅಂಗಾಂಗ ದಾನ ಪಡೆಯುವ ಸಂದರ್ಭದಲ್ಲಿ ಸೂಕ್ತ ನಿಯಮಗಳನ್ನು ಪಾಲಿಸಬೇಕು ಎಂದು ಸಚಿವರು ತಿಳಸಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243