ದಿನದ ಸುದ್ದಿ
ಬಿ.ಎಸ್.ಎನ್.ಎಲ್ ವತಿಯಿಂದ ಸಿಮ್ ಫೆಸ್ಟ್
ಸುದ್ದಿದಿನ,ದಾವಣಗೆರೆ : ಬಿ.ಎಸ್.ಎನ್.ಎಲ್ ದಾವಣಗೆರೆ ಟೆಲಿಕಾಂ ಜಿಲ್ಲೆ ವತಿಯಿಂದ ಮಾ.28 ರವರೆಗೆ ಸಿಮ್‍ಗಳ ಉಚಿತ ವಿತರಣೆಗಾಗಿ, ಎಲ್ಲಾ ಸಿ.ಎಸ್.ಸಿ ಸ್ಥಳಗಳಲ್ಲಿ “ಬಿ.ಎಸ್.ಎನ್.ಎಲ್ ಸಿಮ್ ಫೆಸ್ಟ್” ಅನ್ನು ಆಯೋಜಿಸುತ್ತಿದೆ.
ಕರ್ನಾಟಕ ಸರ್ಕಲ್‍ನಲ್ಲಿರುವ ಎಲ್ಲಾFTTH ಬ್ರಾಡ್‍ಬ್ಯಾಂಡ್ ಯೋಜನೆಗಳಾದ್ಯಂತ ಮೊದಲ ಸ್ಥಿರ ಮಾಸಿಕ ಶುಲ್ಕಗಳಲ್ಲಿ (FMC) ರೂ. 500/- ವರೆಗೆ 90% ರಿಯಾಯಿತಿ ನೀಡಲು ಪ್ರಚಾರದ ಯೋಜನೆಯನ್ನು ಸಹ ಪರಿಚಯಿಸಲಾಗಿದೆ.
ಬಿ.ಎಸ್.ಎನ್.ಎಲ್ ಗ್ರಾಹಕ ಸೇವಾ ಕೇಂದ್ರಗಳು ಮಾರ್ಚ್-2022ರ ಎಲ್ಲಾ ಭಾನುವಾರಗಳಂದು ತೆರೆದಿರುತ್ತವೆ. ಎಲ್ಲಾ ಗೌರವಾನ್ವಿತ ಗ್ರಾಹಕರು ಉಚಿತ ಸಿಮ್‍ಗಳು, ಪಾವತಿ ಬಿಲ್‍ಗಳು, ರಿಚಾರ್ಜ, ಆಧಾರ್ ನೋಂದಣಿ ಮತ್ತು ರಿಯಾಯಿತಿ ಹೊಸ FTTH ಬ್ರಾಡ್‍ಬ್ಯಾಂಡ್ ಸಂಪರ್ಕವನ್ನು ಪಡೆಯುವ ಅವಕಾಶವನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243