ದಿನದ ಸುದ್ದಿ
ಗದುಗಿನ ತೋಂಟದಾರ್ಯ ಮಠದ ನೂತನ ಉತ್ತರಾಧಿಕಾರಿ ‘ಬಸವನುಯಾಯಿ ಡಾ ಸಿದ್ದರಾಮ ಶ್ರೀ’ಗಳಿಗೆ ಶರಣರ ಆಶೀರ್ವಾದವಿರಲಿ
ಶ್ರೀ ಸಾಮಾನ್ಯರ ಶ್ರೀಗಳಾಗಿ,ಕಂದಾಚಾರ ಮೂಢನಂಬಿಕೆಯ ವಿರುದ್ಧ ಗುಡುಗಿ ತ್ರಿವಿಧ ದಾಸೋಹಿಗಳಾಗಿ,ಗೋಕಾಕ್ ಚಳವಳಿಗೆ ನಾಂದಿ ಹಾಡಿ , ಜನ ಮೆಚ್ಚಿದ ಗುರುವಾದ ಗದುಗಿನ ತೋಂಟದಾರ್ಯ ಶ್ರೀ ಮಠದ ಡಾ.ಸಿದ್ದಲಿಂಗ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ಪೀಠಾಭಿಮಾನಿಗಳಿಗೆ ಬರ ಸಿಡಿಲಿನಂತೆ ಎರಗಿದ್ದು ಎಲ್ಲರನ್ನೂ ದುಃಖದ ಮಡುವಿನಲ್ಲಿ ಮಲಗಿಸಿದೆ. ಪೂಜ್ಯರು 2008 ರಲ್ಲಿಯೇ ತಮ್ಮ ಉತ್ತರಾಧಿಕಾರಿಗಳನ್ನಾಗಿ ನಾಗನೂರು ರುದ್ರಾಕ್ಷಿ ಮಠದ ಶ್ರೀಗಳ ಹೆಸರನ್ನು ಉಯಿಲಿನಲ್ಲಿ ನಮೂದಿಸಿರುವುದು ತಮ್ಮ ನಂತರವೂ ಸಮಾಜ ಮುಖಿ ಚಿಂತನೆಯ ಯೋಗ್ಯ ಉತ್ತರಾಧಿಕಾರಿಗಳನ್ನಾಗಿ ಆಯ್ಕೆ ಮಾಡಿರುವುದು ಲೋಕ ಮೆಚ್ಚುಗೆಗೆ ಪಾತ್ರವಾಗಿದೆ.
ಗದುಗಿನ ತೋಂಟದಾರ್ಯ ಶ್ರೀ ಮಠದ ಉತ್ತರಾಧಿಕಾರಾಯಾಗಿ ನೇಮಕಗೊಂಡ ನಾಗನೂರೂ ರುದ್ರಾಕ್ಷಿ ಮಠದ ಪೂಜನೀಯ ಡಾ. ಶ್ರೀ ಸಿದ್ದರಾಮ ಸ್ವಾಮೀಜಿಯವರು ಅಪ್ಪಟ ಬಸವಣ್ಣನವರ ಅನುಯಾಯಿಗಳು. ಧಾರ್ಮಿಕ ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಿರುವ ನಿತ್ಯ ಕ್ರಾಂತಿ ಯೋಗಿಗಳು.ಸಮತೆಯ ಹಾಗೂ ಸಮಾಜ ಕಲ್ಯಾಣದ ಕನಸು ಹೊತ್ತವರು,ಸ್ವತಂತ್ರ
ಲಿಂಗಾಯತ ಧರ್ಮದ ಸಾಧಕ ಬಾಧಕಗಳನ್ನು ಅರಿತು ಪ್ರಚುರ ಪಡಿಸಿದವರು.ಸಾಂಸ್ಕೃತಿಕ ಮತ್ತು ವಚನ ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವವರು.
ನಾನೇ ಶ್ರೇಷ್ಠ ಎಂದು ಬೊಗಳೇ ಬಿಡುವ ಪೂಜಾರಿ ಪುರೋಹಿತ ಕಪಟ ಕಾವಿಧಾರಿಗಳ ನಿದ್ದೆ ಕೆಡಿಸಿದವರು.ಕಾಯಕವೇ ಪೂಜೆ, ಜನತೆಯೇ ಜಂಗಮವೆಂಬ ತತ್ವವನ್ನು ನಿತ್ಯಾನುಷ್ಟಾನ ಕೈಂಕರ್ಯದ ತರಳಬಾಳು ಶ್ರೀ ಜಗದ್ಗುರುವರ್ಯರೊಡನೆ ಉತ್ತಮ ಬಾಂಧವ್ಯ ಹೊಂದಿದವರು.ತರಳಬಾಳು ಶ್ರೀ ಜಗದ್ಗುರುವರ್ಯರ ವಿದ್ವತ್ ಪ್ರಭೆಗೆ ಮಾರು ಹೋಗಿ ಮಾರ್ಗದರ್ಶನದ ಆಶೀರ್ವಾದ ಬೇಡುವ ನಿಜ ಸಂತರು. ಪೂಜ್ಯರು ಇತ್ತೀಚೆಗೆ ಜಗಳೂರಿನಲ್ಲಿ ಜರುಗಿದ ತರಳಬಾಳು ಹುಣ್ಣಿಮೆ ಮಹೋತ್ಸವದ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಕರುಣಿಸಿದ ಆಶೀರ್ವಚನ ಶ್ರೀ ಮಠದ ಮೇಲೆ ಅವರು ಹೊಂದಿರುವ ಗೌರವ ವಿಶ್ವಾಸಗಳಿಗೆ ಸಾಕ್ಷಿಯಂತಿದೆ.
ಪೂಜ್ಯರು ಕನ್ನಡದ ಜಗದ್ಗುರುವಿನ ಆಶೀರ್ವಾದದ ಆಣತಿಯಂತೆ.ಗದಗಿನ ಡಂಬಳದ ತೋಂಟದಾರ್ಯ ಮಠದ ಗುರುತರ ಜವಾಬ್ದಾರಿ ಹೊರಲಿರುವುದು ಬಸವಾನುಯಾಯಿಗಳಿಗೆ ಸಂತಸ ತಂದಿದೆ.
ನಡೆ ಮತ್ತು ನುಡಿಯಲಿ ಅಣ್ಣನವರ ಆಜ್ಞಾದಾರಿಗಳಾದ ಶ್ರೀಗಳಿಗೆ ವಿಶ್ವಬಂಧು ಮರುಳಸಿದ್ದರ ತರಳಬಾಳು ಜಗದ್ಗುರುವರ್ಯರ ಆಶೀರ್ವಾದ ಪೂರ್ವಕ ಮಾರ್ಗದರ್ಶನ ಸದಾ ಇರಲೆಂಬ ಆಶಯ ನಮ್ಮದು.
ಸುದ್ದಿದಿನ.ಕಾಂ|ವಾಟ್ಸಾಪ್|9986715401