ದಿನದ ಸುದ್ದಿ
ಭಾರತ-ನೇಪಾಳ ನಡುವೆ ಆರು ಪ್ರಮುಖ ಒಪ್ಪಂದಗಳಿಗೆ ಅಂಕಿತ
ಸುದ್ದಿದಿನ ಡೆಸ್ಕ್ : ಭಾರತ ಮತ್ತು ನೇಪಾಳ ಇಂದು ಆರು ಮಹತ್ವದ ಒಡಂಬಡಿಕೆಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಿ, ವಿನಿಮಯ ಮಾಡಿಕೊಂಡಿವೆ.
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು ಮತ್ತು ಲುಂಬಿನಿ ಬೌದ್ಧ ವಿಶ್ವವಿದ್ಯಾಲಯದಲ್ಲಿ ಬೌದ್ಧ ಧರ್ಮದ ಕುರಿತು ಅಧ್ಯಯನ ನಡೆಸಲು ಡಾ. ಅಂಬೇಡ್ಕರ್ ಪೀಠ ಸ್ಥಾಪನೆ ಹಾಗೂ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು ಮತ್ತು ಕಠ್ಮಂಡು ವಿಶ್ವವಿದ್ಯಾಲಯದಲ್ಲಿ ಭಾರತೀಯ ಅಧ್ಯಯನಗಳ ಕುರಿತು ಐಸಿಸಿಆರ್ ಪೀಠ ಸ್ಥಾಪನೆ ಸೇರಿದಂತೆ ಆರು ಒಡಂಬಡಿಕೆಗಳಿಗೆ ಅಂಕಿತ ಹಾಕಲಾಗಿದೆ.
ಸ್ನಾತಕೋತ್ತರ ಮಟ್ಟದಲ್ಲಿ ಜಂಟಿ ಪದವಿ ಕಾರ್ಯಕ್ರಮಕ್ಕಾಗಿ ಕಠ್ಮಂಡು ವಿಶ್ವವಿದ್ಯಾಲಯ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ ನಡುವೆ ಒಪ್ಪಂದ ಪತ್ರಕ್ಕೆ ಉಭಯ ದೇಶಗಳು ಸಹಿ ಹಾಕಿವೆ. ಅರುಣ್ ೪ ಯೋಜನೆ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ಎಸ್‌ಜೆವಿಎನ್ ಕಂಪನಿ ಮತ್ತು ನೇಪಾಳ ವಿದ್ಯುತ್ ಪ್ರಾಧಿಕಾರದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರ ನಡುವೆ ದ್ವಿಪಕ್ಷೀಯ ಮಾತುಕತೆ ನಂತರ ಒಡಂಬಡಿಕೆಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇದಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ, ವೈಶಾಖ ಬುದ್ಧ ಪೂರ್ಣಿಮಾ ಅಂಗವಾಗಿ ನೇಪಾಳದ ಲುಂಬಿನಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸಕ್ತ ಸಂದರ್ಭದಲ್ಲಿ ಜಗತ್ತಿನಲ್ಲಿ ಎದುರಾಗಿರುವ ಪರಿಸ್ಥಿತಿ ನಡುವೆ ಇಡೀ ಮಾನವ ಕುಲದ ಒಳಿತಿಗಾಗಿ ಭಾರತ ಮತ್ತು ನೇಪಾಳ ನಡುವಿನ ಮಿತ್ರತ್ವ ಮತ್ತು ನಿಕಟ ಬಾಂಧವ್ಯ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.
ಬುದ್ಧನ ಆದರ್ಶಗಳೊಂದಿಗೆ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ನೇಪಾಳದ ಸಂಬಂಧ ಸಹಕಾರಿಯಾಗಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ನೇಪಾಳದಲ್ಲಿ ಲುಂಬಿನಿ ವಸ್ತುಸಂಗ್ರಹಾಲಯ ನಿರ್ಮಾಣ ಮಾಡುತ್ತಿರುವುದು ಭಾರತ ಮತ್ತು ನೇಪಾಳದ ಸಹಕಾರಕ್ಕೆ ಉದಾಹರಣೆಯಾಗಿದೆ. ಲುಂಬಿನಿ ಬೌದ್ಧ ವಿಶ್ವವಿದ್ಯಾಲಯದಲ್ಲಿ ಬೌದ್ಧ ಧರ್ಮದ ಕುರಿತು ಅಧ್ಯಯನ ನಡೆಸಲು ಡಾ. ಅಂಬೇಡ್ಕರ್ ಪೀಠ ಸ್ಥಾಪನೆಗೆ ಎರಡೂ ದೇಶಗಳು ತೀರ್ಮಾನಿಸಿವೆ.
ಬುದ್ಧನ ಉಪದೇಶಗಳನ್ನು ಜಗತ್ತಿನಾದ್ಯಂತ ಪ್ರಚಾರ ಮಾಡುವಲ್ಲಿ ಭಾರತ ಮತ್ತು ನೇಪಾಳದ ಯುವಕರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ವಿಶ್ವಾಸವನ್ನು ನರೇಂದ್ರ ಮೋದಿ ವ್ಯಕ್ತಪಡಿಸಿದರು.
ನೇಪಾಳಕ್ಕೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಸಂಜೆ ಖುಷಿನಗರಕ್ಕೆ ವಾಪಸ್ಸಾದರು. ಇದಕ್ಕೂ ಮುನ್ನ ಅವರು ನೇಪಾಳದಲ್ಲಿ ಮಹಾ ಪರಿನಿರ್ವಾಣ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ’ಚಿವರ್ ದನ್’ ಸಾಂಪ್ರದಾಯಿಕ ವಿಧಿಗಳನ್ನು ನಿರ್ವಹಿಸಿದರು. ಖುಷಿನಗರ ತಲುಪಿರುವ ನರೇಂದ್ರ ಮೋದಿ ಅವರು, ಅಲ್ಲಿಂದ ಲಖನೌಗೆ ಪ್ರಯಾಣ ಬೆಳೆಸಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
Today’s meeting with PM @SherBDeuba was excellent. We discussed the full range of relations between India and Nepal. Key MoUs were signed which will diversify and deepen cooperation. pic.twitter.com/UzchwOqCZp
— Narendra Modi (@narendramodi) May 16, 2022
Prayed at the Mahaparinirvana Stupa in Kushinagar. Our Government is making numerous efforts to boost infrastructure in Kushinagar so that more tourists and pilgrims can come here. pic.twitter.com/lWWFq8HCqs
— Narendra Modi (@narendramodi) May 16, 2022
My Nepal visit on Buddha Purnima has been a special one. I would like to thank PM @SherBDeuba, the wonderful people and Government of Nepal for the affection. https://t.co/6gWUidwftR
— Narendra Modi (@narendramodi) May 16, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243