ದಿನದ ಸುದ್ದಿ

ದಾವಣಗೆರೆ | ಅಂಗನವಾಡಿ ಕಾರ್ಯಕರ್ತೆ- ಮೇಲ್ವಿಚಾರಕಿಯರಿಗೆ ಸ್ಮಾರ್ಟ್ ಪೋನ್ ವಿತರಣೆ

Published

on

ಸುದ್ದಿದಿನ,ದಾವಣಗೆರೆ : ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ವೃತ್ತದ ಮೇಲ್ವಿಚಾರಕಿಯರಿಗೆ ಕೇಂದ್ರ ಸರ್ಕಾರದ ಯೋಜನೆಯಾದ ರಾಷ್ಟ್ರೀಯ ಪೋಷಣ್ ಅಭಿಯಾನ (ಮಿಷನ್ 2.0) ಯೋಜನೆಯಡಿ ಸ್ಯಾಮ್‍ಸಾಂಗ್ ಗ್ಯಾಲಾಕ್ಷಿ 40.ಎಸ್ ಸ್ಮಾರ್ಟ್ ಫೋನ್‍ಗಳನ್ನು ವಿತರಿಸಲಾಗಿದೆ.

ಈ ಫೋನ್‍ಮೂಲಕ ಅಂಗನವಾಡಿ ಕಾರ್ಯಕರ್ತೆಯರು ಪೋಷಣ್ ಟ್ರ್ಯಾಕರ್ ಆಪ್ ಮೂಲಕ ಪ್ರತಿ ದಿನ ಅಂಗನವಾಡಿ ಕೇಂದ್ರದ ದೈನಂದಿನ ಚಟುವಟಿಕೆಗಳಾದ ಮಕ್ಕಳ ಹಾಜರಾತಿ, ಶಾಲಾ ಪೂರ್ವ ಶಿಕ್ಷಣ, ಹಾಗೂ ಬಿಸಿ ಊಟ ವಿತರಣೆ ಮುಂತಾದವುಗಳನ್ನು ಪೋಷಣ್ ಟ್ರ್ಯಾಕರ್ ನಲ್ಲಿ ತಪ್ಪದೇ ಅಳವಡಿಸಲು ಬೇಕು. ಹಾಗೂ ಸರ್ಕಾರದಿಂದ ನೀಡಿರುವ ಸ್ಮಾರ್ಟ್ ಫೋನ್‍ಗಳನ್ನು ಸದ್ಬಳಕೆ ಮಾಡಿಕೊಂಡು ಇಲಾಖಾ ಮಾಹಿತಿಯನ್ನು ನಿರ್ವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಿರೂಪಣಾಧಿಕಾರಿಗಳಾದ ರಾಜಕುಮಾರ್ ರಾಠೋಡ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ, ಅಭಿಕುಮಾರ್ ಜಿ.ಎಸ್, ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಪೋಷಣೆ ಅಭಿಯಾನ ಯೋಜನೆಯ ಸಿಬ್ಬಂದಿಗಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version