ದಿನದ ಸುದ್ದಿ

ರಾಷ್ಟ್ರೀಯ ಯುವಜನೋತ್ಸವ ಆಯ್ಕೆ ಸ್ಪರ್ಧೆ; ಸ್ಮೃತಿಗೆ ಶಾಸ್ತ್ರೀಯ ನೃತ್ಯದಲ್ಲಿ ಮೊದಲನೇ ಸ್ಥಾನ

Published

on

ಸುದ್ದಿದಿನ,ದಾವಣಗೆರೆಯ : ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಸೋಮವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯವತಿಯಿಂದ ರಾಷ್ಟ್ರೀಯ ಯುವಜನೋತ್ಸವಕ್ಕೆ ನಡೆಸಿದ ಜಿಲ್ಲಾ ಮಟ್ಟದ ಆಯ್ಕೆ ಸ್ಪರ್ಧೆಯಲ್ಲಿ ಶಾಸ್ತ್ರೀಯ ನೃತ್ಯ ವಿಭಾದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದ ಕು. ಸ್ಮೃತಿ ಎಂ. ಪಿ. ಮೊದಲ ಸ್ಥಾನ ಗಳಿಸಿದರು.

ಕುಮಾರಿ ಸ್ಮೃತಿ ನೃತ್ಯದ ಝಲಕ್

ಇವರು ಜಗಳೂರು ತಾಲ್ಲೂಕು, ಮಾದಮುತ್ತೇನಹಳ್ಳಿ ಗ್ರಾಮದವರಾಗಿದ್ದು ಜಗಳೂರು ತಾಲ್ಲೂಕನ್ನು ಪ್ರತಿನಿಧಿಸಿದ್ದರು. ಇವರು ಹಂಸನಂದಿ ರಾಗ ಮತ್ತು ಮಿಶ್ರ ಛಾಪು ತಾಳಕ್ಕೆ ಜೋಡಿಸಲಾದ ʼನಾದ ಪ್ರಿಯ ಶಿವನೆಂಬರುʼ ಎಂಬ ಬಸವಣ್ಣವನರ ವಚನಕ್ಕೆ ನೃತ್ಯ ಪ್ರದರ್ಶನ ನೀಡಿದರು. ಕುಮಾರಿ ಸ್ಮೃತಿ ಎಂ ಪಿ ಇವರು ತುಮಕೂರಿನ ನೀಲಾಲಯ ನೃತ್ಯ ಕೇಂದ್ರದ ಗುರು ಶ್ರೀಮತಿ ಬಾಲಾ ವಿಶ್ವನಾಥ ಇವರ ಶಿಷ್ಯೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version