ದಿನದ ಸುದ್ದಿ
ಹಾವು ಕಚ್ಚಿ 14 ವರ್ಷದ ಬಾಲಕ ಸಾವು
ಸುದ್ದಿದಿನ, ಯಾದಗಿರಿ : ಹಾವು ಕಚ್ಚಿ 14 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ದಿಗ್ಗಿ ಗ್ರಾಮದಲ್ಲಿ ನಡೆದಿದೆ.
ಪ್ರಭು ತಂದೆ ಮಲ್ಲಣ್ಣ ಅಂಗಡಿ ಎಂಬ ಬಾಲಕ ತನ್ನ ಮನೆಯ ಹೊರಗೆ ರಾತ್ರಿ ಗಟ್ಟಿ ಮೇಲೆ ಮಲಗಿದಾಗ ಹಾವು ಕಚ್ಚಿದ್ದು, ಚಿಕಿತ್ಸೆ ಫಲಕಾರಿ ಆಗದೆ ಇಂದು ಬೆಳಿಗ್ಗೆ 4 ಗಂಟೆಗೆ ಬಾಲಕ ಸಾವನ್ನಪ್ಪಿದ್ದಾನೆ. ಪೋಷಕರ ಆಕ್ರಂದನಾ ಮಿಗಿಲು ಮುಟ್ಟಿದೆ.
ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೋಸ್ಟ್ ಮಾರ್ಟಮ್ ಮಾಡೋದಕ್ಕೆ ಶಹಾಪೂರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.