ದಿನದ ಸುದ್ದಿ

ಬ್ಯಾಗಲ್ಲಿ ಹಾವಿಟ್ಟುಕೊಂಡು ಒಂದು ಕಿ.ಮೀ. ನಡೆದ ಹುಡುಗ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್: ತನ್ನ ಶಾಲಾ ಬ್ಯಾಗ್ ನಲ್ಲಿ ನಾಗರ ಹಾವು ಇದ್ದದ್ದು ಗೊತ್ತಿರದೆ ಹುಡುಗನೊಬ್ಬ ಒಂದು ಕಿ.ಮೀ. ನಡೆದ ಘಟನೆ ಕರ್ನಾಟಕ ಗಡಿಯ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.

ಬೆಂಗಳೂರಿನಿಂದ 90 ಕಿ.ಮೀ. ದೂರದಲ್ಲಿರುವ ತಮಿಳುನಾಡಿನ ಕಾಮರಾಜನಗರ ಸರಕಾರಿ ಶಾಲೆಯಲ್ಲಿ ಓದುತ್ತಿರುವಾಗ ಹುಡುಗ ಹಾವು ಇದ್ದ ತನ್ನ ಬ್ಯಾಗ್ ಅನ್ನು ಶಾಲಾ ಕೊಠಡಿಯಲ್ಲಿ ತೆರೆದಾಗ ನಾಗರ ಮೆತ್ತಗೆ ಮಲಗಿತ್ತು. ಹಾವು ಕಂಡ ವಿದ್ಯಾರ್ಥಿಯು ಬ್ಯಾಗನ್ನು ದೂರಕ್ಕೆ ಎಸೆದಿದ್ದು ಬ್ಯಾಗ್ ನಿಂದ ಹಾವು ಹೊರ ಬಂದ ವಿಡಿಯೊ ವೈರಲ್ ಆಗಿದೆ.

ಹುಡುಗನು ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಬೆಂಚಿನ ಮನೆಯಾದ್ದರಿಂದ ಸುಲಭವಾಗಿ ಬಂದ ಹಾವು ಬ್ಯಾಗ್ ನಲ್ಲಿ ಸೇರಿಕೊಂಡಿದೆ ಎಂದು ತಿಳಿದುಬಂದಿದೆ.
ಈ ಹುಡುಗ ತನ್ನ ಬ್ಯಾಗ್ ನಲ್ಲಿ ಹಾವಿದೆ ಎಂಬ ಅರಿವಿಲ್ಲದೆ ಒಂದು. ಕಿ.ಮೀ. ನಡೆದದ್ದೇ ಅಚ್ಚರಿ.
ಅಕಸ್ಮಾತ್ ಹುಡುಗ ಬ್ಯಾಗ್ ನೊಳಗೆ ನೆರವಾಗಿ ಕೈ ಹಾಕಿದ್ದರೆ ಏನಾಗುತ್ತಿತ್ತು ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version