ದಿನದ ಸುದ್ದಿ
ಶೂನೊಳಗೆ ಸೇರಿದ್ದ ಹಾವು ಹಿಡಿದ ಸ್ನೇಕ್ ಶ್ಯಾಮ್
ಸುದ್ದಿದಿನ ಡೆಸ್ಕ್: ಶೂನೊಳಗೆ ಸೇರಿದ್ದ ಹಾವೊಂದನ್ನು ಹಾವುಗಳ ಸಂರಕ್ಷಕ ಹಾಗೂ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ ಅವರು ಯಶಸ್ವಿಯಾಗಿ ಹಿಡಿದಿದ್ದು, ಅದನ್ನು ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಮಳೆ ಹಾಗೂ ಚಳಿಗಾಲದಲ್ಲಿ ಹಾವುಗಳು ಬೆಚ್ಚಗಿನ ಪ್ರದೇಶವನ್ನು ಬಯಸುತ್ತವೆ. ಹಾಗಾಗಿ ಅವು ಶೂನೊಳಗೆ ಸೇರಿಕೊಳ್ಳುತ್ತವೆ. ಹಾಗಾಗಿ ಇಂಥ ಸಮಯದಲ್ಲಿ ಶೂ ಹಾಕುವ ಮೊದಲು ಅದನ್ನು ಪರಿಶೀಲಿಸಬೇಕು. ಶೂ ಅಷ್ಟೆ ಅಲ್ಲ ಸೌದೆಗಳಿರುವ ಜಾಗ, ರಟ್ಟಿನ ಬಾಕ್ಸ್ ಮೊದಲಾದವುಗಳಲ್ಲಿ ಬೆಚ್ಚಗಿನ ವಾತಾವರಣ ಇರುವ ಕಾರಣ ಹಾವುಗಳು ಅಲ್ಲಿಯೂ ಸೇರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಶ್ಯಾಂ.