ರಾಜಕೀಯ

ಸಾಮಾಜಿಕ ಜಾಲತಾಣ ಅಭಿಯಾನ | ‘ನನ್ನ ಸಿಎಂ ಸತೀಶ ಜಾರಕಿಹೊಳಿ’

Published

on

ಸುದ್ದಿದಿನ, ದಾವಣಗೆರೆ : ಮಾಜಿ ಸಿಎಂ ಸಿದ್ದರಾಮಯ್ಯ ಪರ ಅವರ ಬೆಂಬಲಿಗರು ಕಾಂಗ್ರೆಸ್ ಶಾಸಕರು ಸಚಿವರು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹೇಳಿಕೆಗಳ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ನಮ್ಮ ಸಿಎಂ ಸಿದ್ದರಾಮಯ್ಯ ಎಂದು ಬರೆದು ಹರಿಬಿಡುತ್ತಿದ್ದಾರೆ.

ಅದೇರೀತಿ ಈಗ ರಾಜ್ಯದ ಮತ್ತೋರ್ವ ಪ್ರಭಾವಿ ಸಚಿವ ಹಾಗೂ ಅಹಿಂದ ನಾಯಕರಾದ ಸತೀಶ್‍ಜಾರಕಿಹೊಳಿ ಅಭಿಮಾನಿಗಳು ನಮ್ಮ ಸಿಎಂ ಸತೀಶ್‍ಜಾರಕಿಹೊಳಿ ಎಂದು ಫೇಸ್‍ಬುಕ್ ಪುಟಗಳಲ್ಲಿ ಬರೆದುಕೊಂಡು ಹರಿಬಿಟ್ಟು, ಜಾರಕಿಹೊಳಿ ಅಭಿಮಾನಿಗಳು ಸಹ ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದೇವೆ ಎಂಬ ಸಂದೇಹ ರವಾನಿಸಿದ್ದಾರೆ.

ಪ್ರಸ್ತುತ ಜೆಡಿಎಸ್ ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಪ್ರಬಲ ನಾಯಕರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಪರ ಅವರ ಬೆಂಬಲಿಗರು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಹಿರಂಗವಾಗಿ ಸಾರುತ್ತಿದ್ದು, ಪರೋಕ್ಷವಾಗಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ದ ಸಮರ ಸಾರುತ್ತಿದ್ದಾರೆ.

https://m.facebook.com/story.php?story_fbid=424351171636910&id=100021860916158

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಗಳಿದರೆ ತಪ್ಪೇನು? ಎಂಬ ವಾದವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಇದು ದಕ್ಷಿಣ ಕರ್ನಾಟಕದ ರಾಜಕೀಯ ನಾಯಕರ ಕಿತ್ತಾಟವಾದರೆ, ಉತ್ತರ ಕರ್ನಾಟಕದ ಜನತೆಯ ಸಂದೇಶವೇ ಭಿನ್ನವಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ರಕ್ಷಕ ಎಂದೇ ಕರೆಸಿಕೊಳ್ಳುವ ಬೆಳಗಾವಿ ಸಾಹುಕಾರ್, ಸದ್ಯ ದೋಸ್ತಿ ಸರ್ಕಾರದ ಅರಣ್ಯ ಸಚಿವ ಸತೀಶ್‍ಜಾರಕಿಹೊಳಿ ಬೆಂಬಲಿಗರು ಸತೀಶ್ ಜಾರಕಿಹೊಳಿ ನನ್ನ ಸಿಎಂ ಎಂದು ಫೆಸ್‍ಬುಕ್‍ನಲ್ಲಿ ಬರೆದುಕೊಳ್ಳುತ್ತಿದ್ದಾರೆ.

https://m.facebook.com/story.php?story_fbid=105148150612593&id=100033522243207

ಈ ಮೂಲಕ ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ ಎಂಬ ಖಡಕ್ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸಿದ್ದಾರೆ.
ಸಚಿವ ಸತೀಶ್‍ಜಾರಕಿಹೊಳಿ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ವಿಷಯದ ಮೇಲೆ ಕೆಲ ದಿನಗಳ ಹಿಂದೆ ಚರ್ಚೆ ನಡೆದಾಗ ನಾನಿನ್ನು 10 ವರ್ಷಗಳ ನಂತರ ಮುಖ್ಯಮಂತ್ರಿ ಅಭ್ಯರ್ಥಿ ಆಕಾಂಕ್ಷಿ ಎಂದು ಸ್ವತಃ ಸಚಿವರೇ ಸ್ಪಷ್ಟಪಡಿಸಿದ್ದರು.
ಇತ್ತೀಚಿಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಸಮಾರಂಭವೊಂದರಲ್ಲಿ ಅಧಿಕಾರ ಎಲ್ಲರಿಗೂ ಸಿಗಬೇಕು, ಸತೀಶ್ ಕೂಡಾ ಸಿಎಂ ಆಗಬೇಕು ಎಂದು ಹೇಳಿದ್ದರು. ಈ ಹಿಂದೆ ನನ್ನ ಸಹೋದರ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗುವವರೆಗೂ ವಿರಮಿಸುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು.

https://m.facebook.com/story.php?story_fbid=1912640958861486&id=100003468012703

ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂಬ ಆರೋಪವಿದೆ. ಆದ್ದರಿಂದ ಪ್ರತ್ಯೇಕ ರಾಜ್ಯದ ಕೂಗು ಕೂಡಾ ಕೇಳಿ ಬರುತ್ತಿದೆ. ದಕ್ಷಿಣ ಕರ್ನಾಟಕದ ರಾಜಕೀಯ ನಾಯಕರ ಕಿತ್ತಾಟಕ್ಕೆ ಉತ್ತರ ಕರ್ನಾಟಕದವರು ನನ್ನ ಸಿಎಂ ಸತೀಶ್ ಜಾರಕಿಹೊಳಿ ಎಂದು ಹೇಳುವ ಮೂಲಕ ನಮಗೂ ಒಂದು ಅವಕಾಶ ನೀಡಬೇಕೆಂಬ ಸಂದೇಶ ರವಾನಿಸಿದ್ದಾರೆ.

ಪೊಲಿಟಿಕಲ್ ಕಿಂಗ್ ಮೇಕರ್ ಹಾಗೂ ಮಾಸ್ಟರ್ ಮೈಂಡ್ ಎಂದೇ ತಮ್ಮ ನಡೆಯಿಂದ ಕರೆಸಿಕೊಳ್ಳುವ ಸತೀಶ್ ಜಾರಕಿಹೊಳಿ ಇಡೀ ರಾಜ್ಯದ ತುಂಬಾ ತಮ್ಮ ಬೆಂಬಲಿಗರನ್ನು ಹೊಂದಿದ್ದಾರೆ. ರಾಜ್ಯದ ಸಾಕಷ್ಟು ಮತಕ್ಷೇತ್ರಗಳಲ್ಲಿ ಇವರೇ ನಿರ್ಣಯಕ. ಎಲ್ಲಾ ಸಮುದಾಯಗಳ ಪರ ನಿಲ್ಲುವ ಅದರಲ್ಲಿಯೂ ವಾಲ್ಮೀಕಿ ನಾಯಕ ಸಮುದಾಯದ ಪ್ರಶ್ನಾತೀತ ನಾಯಕ ಎಂದರೆ ತಪ್ಪಾಗಲಾರದು. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಚಿವರ ಅಭಿಮಾನಿಗಳಿದ್ದು, ನಮ್ಮ ಸಿಎಂ ಸತೀಶ್‍ಜಾರಕಿಹೊಳಿ ಎಂಬ ಅಭಿಯಾನದ ಕೂಗು ಹೆಚ್ಚಾಗಿ ತೀವ್ರ ಸ್ವರೂಪ ಪಡೆದುಕೊಂಡರು ಅಚ್ಚರಿಪಡಬೇಕಿಲ್ಲ.

https://m.facebook.com/story.php?story_fbid=2249690161910902&id=100006098199391

ಸತೀಶ್ ಜಾರಕಿಹೊಳಿ ಸ್ಥಾಪಿಸಿರುವ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ರಾಜ್ಯಾದ್ಯಂತ ಇದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಂತೆ ಸಚಿವರು ಸಹ ಅಹಿಂದ ನಾಯಕರಿದ್ದಾರೆ. ಅಲ್ಲದೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಎಲ್ಲಾ ವರ್ಗದವರು ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ. ಅದರಂತೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೂ ಮುಖ್ಯಮಂತ್ರಿ ಪಟ್ಟಾ ಸಿಗಬೇಕಿದೆ ಎಂಬುದು ಅವರೆಲ್ಲ ಅಭಿಮಾನಿಗಳ ಬಯಕೆ. ಪ್ರತಿಬಾರಿ ಅಸಮಾಧಾನಗೊಂಡಾಗಲೆಲ್ಲ ಮೂಗಿಗೆ ತುಪ್ಪ ಸವರುವ ಕೆಲಸ ಆಗುತ್ತಿದೆ. ತಕ್ಷಣಕ್ಕೆ ಮುಖ್ಯಮಂತ್ರಿ ಬದಲಾವಣೆ ಆಗಬೇಕೆಂಬುದು ನಮ್ಮ ಅಭಿಪ್ರಾಯವಲ್ಲ. ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಮೊದಲ ಆದ್ಯತೆ ನೀಡಬೇಕಿದೆ”.

 

 

 

 

 

  |ರಾಘುದೊಡ್ಮನಿ,ಸಂಚಾಲಕರು, ಮಾನವ ಬಂಧುತ್ವ ವೇದಿಕೆ, ದಾವಣಗೆರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version