ಲೈಫ್ ಸ್ಟೈಲ್

ಬೇಸಗೆಯಲ್ಲಿ ಬಳಸಲೇ ಬೇಕಾದ ಕೆಲವು ವಸ್ತುಗಳು

Published

on

ಸನ್ ಸ್ಕಿನ್ ಕ್ರೀಂ

ಬಿಸಿಲಿಗೆ ಹೋಗುವುದಕ್ಕೆ ಸುಮಾರು 15 ನಿಮಿಷ ಮುನ್ನ ಸನ್ ಸ್ಕಿನ್ ಕ್ರೀಂ ಅನ್ನು ಮುಖ, ಕೈಕಾಲು, ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಬೇಕು. ಇದನ್ನು ಯಾವಾಘಲೂ ಜೊತೆಯಲ್ಲಿಯೇ ಇರಿಸಿಕೊಂಡಿರೆ ಒಳ್ಳೆಯದು.

ಮೆಡಿಕೇಟೆಡ್ ಲಿಪ್‍ಬಾಮ್

ಬೇಸಿಗೆಯ ಬಿರುಬಿಸಿಲಿಗೆ ತುಟಿ ಒಣಗುತ್ತಿರುತ್ತದೆ. ಎಷ್ಟು ನೀರು ಕುಡಿದರೂ ಸಾಕಾಗುವುದೇ ಇಲ್ಲ. ಇದಕ್ಕಾಗಿ ಮಾರುಕಟ್ಟೆಗೆ ಮೆಡಿಕೇಟೆಡ್ ಲಿಪ್‍ಬಾಮ್ ಬಂದಿದೆ. ಇದನ್ನು ತುಟಿಗೆ ಸವರಿದರೆ ಬೇಸಿಗೆಯಲ್ಲಿ ತುಟಿ ಒಣಗಿ ಸೌಂದರ್ಯಕ್ಕೆ ಧಕ್ಕೆಯಾಗುವುದು ತಪ್ಪುತ್ತದೆ.

ಟೋಪಿ

ಬೇಸಿಗೆಯಲ್ಲಿ ಮುಖಕ್ಕೆ ನೇರವಾಗಿ ಸೂರ್ಯನ ಕಿರಣ ಬೀಳುವುದನ್ನು ತಡೆಗಟ್ಟಲು ಅಗಲೌಆದ ಟೋಪಿ ಧರಿಸಿ. ಇದರಿಂದ ನೆರಳಿನಲ್ಲಿ ಹೋದಂತೆಯೇ ಆಗಿ ಮುಖ ಬಾಡುವುದಾಗಲ;ಇ, ಚರ್ಮ ಒಣಗುವುದಾಗಲಿ ಆಗುವುದಿಲ್ಲ.

ಫೌಂಡೇಶನ್ ಆಯ್ಕೆ

ಎಣ್ಣೆ ತ್ವಚೆಯವರು ಲಿಕ್ವಿಡ್ ಅಂಶ ಇರುವ ಫೌಡೇಶನ್ ಹಚ್ಚಬಾರದು. ಅದರಲ್ಲೂ ಬೇಸಿಗೆಯಲ್ಲಿ ಇದು ನಿಷಿದ್ಧ. ಇದರಿಂಧ ತ್ವಚೆಯಲ್ಲಿ ಜಿಡ್ಡಾಗುತ್ತದೆ. ಇದರ ಬದಲು ಫೌಂಡೇಶನ್ ಪೌಡರ್ ಬಳಸಿ.

ಟಿಶ್ಯೂ ಪೇಪರ್

ಹಾಗೆಯೇ ನಿಮ್ಮ ಬಳಿ ಯಾವಾಗಲೂ ಟಿಶ್ಯೂಪೇಪರ್ ಇಟ್ಟುಕೊಳ್ಳಿರಿ. ಮುಖದಲ್ಲಿನ ಎಣ್ಣೆ ಹೀರಲು ಇದು ಉತ್ತಮ. ಮುಖದಲ್ಲಿ ಎಣ್ಣೆ ಅಂಶ ಆಗುತ್ತಿದೆ ಎಂದು ಅರಿವಿಗೆ ಬಂದಾಗಲೆಲ್ಲ ನಿಧಾನವಾಗಿ ಇದರಿಂದ ಒರೆಸುತ್ತಿರಬೇಕು.

ಇವುಗಳ ಜೊತೆಗೆ ಎಲ್ಲ ರೀತಿಯ ತ್ವಚೆಯುಳ್ಳವರು ಅನುಸರಿಸಲೇ ಬೇಕಾದ ವಿಧಾನ ಎಂಧರೆ ಸಾಕಷ್ಟು ನಿದ್ದೆ ಹಾಗೂ ಉತ್ತಮ ಆಹಾರ ಸೇವನೆ.

 

ಸುದ್ದಿಗಾಗಿ,ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ ¦ 9986715401

Leave a Reply

Your email address will not be published. Required fields are marked *

Trending

Exit mobile version