ದಿನದ ಸುದ್ದಿ
ಸೆ. 27ರಂದು ಸಾಹಿತಿ ಪಾಪುಗುರು ಅವರ ಬಹು ನಿರೀಕ್ಷೆಯ ” ಸೂಜಿ ” ಕಾದಂಬರಿ ಲೋಕಾರ್ಪಣೆ
ಸುದ್ದಿದಿನ, ದಾವಣಗೆರೆ: ಬಿಡುಗಡೆಗೂ ಮುನ್ನ ಸಾಹಿತ್ಯ ವಲಯದಲ್ಲಿ ಸದ್ದಿಲ್ಲದೆ ಸಂಚಲನ ಮೂಡಿಸಿ ಮೊದಲ ಮುದ್ರಣದ ಪ್ರತಿಗಳು ಓದುಗರಿಂದ ಮುಂಗಡ ಆನ್ ಲೈನ್ ಬುಕ್ಕಿಂಗ್ ಆಗಿ ಎರಡನೇ ಮುದ್ರಣಕ್ಕೆ ಸಿದ್ಧಗೊಂಡಿರುವ, ಪ್ರಬುದ್ಧ ಕವಿ, ಸಾಹಿತಿ ಶ್ರೀ ಪಾಪು ಗುರು, ದಾವಣಗೆರೆ ಅವರ ಬಹು ನಿರೀಕ್ಷೆಯ ಕುತೂಹಲಕಾರಿ ” ಸೂಜಿ ” ಕಾದಂಬರಿಯ ಲೋಕಾರ್ಪಣೆ ಸಮಾರಂಭ ದಿನಾಂಕ : 27.09.2020 ರ ಭಾನುವಾರ ಬೆಳಿಗ್ಗೆ 10.30ಕ್ಕೆ ದಾವಣಗೆರೆಯ ವಿದ್ಯಾ ನಗರದ ಕುವೆಂಪು ಕನ್ನಡ ಭವನದಲ್ಲಿ ಜರುಗಲಿದೆ.
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಿ. ಶಿವಲಿಂಗಪ್ಪ ಸಾಹಿತ್ಯ ಬಳಗ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಶಾಸಕರು, ವಾಗ್ಮಿಗಳಾದ ವೈ. ಎಸ್. ವಿ. ದತ್ತಾರವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾಧ್ಯಕ್ಷರಾದ ಡಾ. ಹೆಚ್. ಎಸ್ ಮಂಜುನಾಥ ಕುರ್ಕಿ ಉದ್ಘಾಟಿಸುವರು.
ನಿವೃತ್ತ ಪ್ರಾಚಾರ್ಯರು, ಸಾಹಿತಿ ಹಾಗೂ ಚಿಂತಕರಾದ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ,ಅಧ್ಯಕ್ಷತೆ ವಹಿಸುವವರು.ಪ್ರಗತಿ ಪರ ಚಿಂತಕರು, ವಿಮರ್ಶಕರು, ಸಾಹಿತಿಗಳಾದ ಡಾ ಎ. ಬಿ. ರಾಮಚಂದ್ರಪ್ಪ ಕಾದಂಬರಿ ” ಸೂಜಿ ” ಯ ಅವಲೋಕನ ಮಾಡುವರು.ವಿಶೇಷ ಆಹ್ವಾನಿತರಾಗಿ ರೈತ ಮುಖಂಡರು ಹಾಗೂ ಸಾಹಿತ್ಯ ಪ್ರೇಮಿಗಳಾದ ತೇಜಸ್ವಿ ಪಟೇಲ್ ಪಾಲ್ಗೊಳ್ಳುವವರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243