ದಿನದ ಸುದ್ದಿ

ಲೇಖಕ ಪಾಪು ಗುರು ಅವರ ಕಾದಂಬರಿ ” ಸೂಜಿ “ಯ 2ನೇ ಮುದ್ರಣದ ಕೃತಿ ಲೋಕಾರ್ಪಣೆ ಇಂದು

Published

on

ಸುದ್ದಿದಿನ, ದಾವಣಗೆರೆ : ಲೇಖಕ ದಾವಣಗೆರೆ ಪಾಪುಗುರು ಅವರ ಬಹು ನಿರೀಕ್ಷಿತ “ಸೂಜಿ” ಕಾದಂಬರಿಯು ಸಾಹಿತ್ಯ ವಲಯದಲ್ಲಿ ನವ ನೂತನ ಸಂಚಲನ ಮೂಡಿಸಿ ಮೊದಲ ಮುದ್ರಣದ ಪ್ರತಿಗಳು ಕೈ ಸೇರುವ ಮುನ್ನವೇ ಸಾಮಾಜಿಕ ಜಾಲತಾಣದ ಮೂಲಕ ಓದುಗರ ಕೈ ಸೇರಿ, ಎರಡನೇ ಮುದ್ರಣ ಪ್ರಕಟಗೊಂಡು ಓದುಗರಿಂದ ಮುಂಗಡ ಬುಕ್ಕಿಂಗ್ ಸಹ ಆಗಿರುವ ಸಂಭ್ರಮದ ಸಂಕೇತವಾಗಿ ದಾವಣಗೆರೆ ದಿ. ಶಿವಲಿಂಗಪ್ಪ ಸಾಹಿತ್ಯ ಬಳಗ, ಸಿದ್ಧಗಂಗಾ ವಿದ್ಯಾಸಂಸ್ಥೆ ಹಾಗೂ ಇಮೇಜ್ ದಿನಪತ್ರಿಕೆ ಬಳಗದ ಸಂಯುಕ್ತಾಶ್ರಯದಲ್ಲಿ 2ನೇ ಮುದ್ರಣದ ” ಸೂಜಿ ” ಕಾದಂಬರಿಯ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ : 03/01/2021 ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸುವರ್ಣ ಸೌಧ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಕಾದಂಬರಿಗಾರ್ತಿ ಶ್ರೀಮತಿ ಜಿ. ಎಸ್. ಸುಶೀಲಾದೇವಿ ಆರ್.ರಾವ್ ಅವರು ಎರಡನೇ ಮುದ್ರಣದ ಸೂಜಿ ಕೃತಿ ಲೋಕಾರ್ಪಣೆ ಮಾಡುವರು. ಉಪನ್ಯಾಸಕಿ, ಲೇಖಕಿ ಅನ್ನಪೂರ್ಣ ಪಾಟೀಲ್ ಅವರು ಕೃತಿ ಅವಲೋಕನ ಮಾಡುವರು.

ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ದಿನಪತ್ರಿಕೆಯ ದಾವಣಗೆರೆ ಬ್ಯೂರೋ ಚೀಫ್ ಸದಾನಂದ ಹೆಗಡೆ, ಸಾಹಿತಿಗಳಾದ ಡಾ. ಆನಂದ್ ಋಗ್ವೇದಿ, ಮಹಾಂತೇಶ್ ಬಿ ನಿಟ್ಟೂರು ಹಾಗೂ ಸಂತೇಬೆನ್ನೂರು ಫೈಜ್ನಟ್ರಾಜ್ ಭಾಗವಹಿಸಿ ಕೃತಿ ಕುರಿತು ಅಭಿಪ್ರಾಯ ನುಡಿಯಾಡುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version