ಸಿನಿ ಸುದ್ದಿ
ಮೈ ಮನ ಪೋಣಿಸೋ ‘ಸೂಜಿದಾರ’ ಸಿನೆಮಾ ಟೀಸರ್ ರಿಲೀಸ್ : ಟೀಸರ್ ನೋಡಿ
ಸುದ್ದಿದಿನ ಡೆಸ್ಕ್ : ಕತೆಗಾರ ಇಂದ್ರಕುಮಾರ್ ಅವರ ಕತೆಯೊಂದನ್ನು ‘ಸೂಜಿದಾರ’ವಾಗಿ ಮೈಮನಗಳ ಪೋಣಿಸಲು ರಂಗಭೂಮಿ ಕಲಾವಿದ, ನಿರ್ದೇಶಕ ಮೌನೇಶ್ ಎಲ್ ಬಡಿಗೇರ್ ರೆಡಿಯಾಗಿದ್ದಾರೆ.
ಬಹುತೇಕ ಸಾಹಿತ್ಯದ ಸಾಂಗತ್ಯವಿರುವವರೇ ಈ ಸಿನೆಮಾ ತಂಡದಲ್ಲಿರುವುದು ವಿಶೇಷ. ಸಿನೆಮಾದ ಸ್ಟಿಲ್ಸ್ ಗಳೂ ಕೂಡಾ ನೋಡುಗರಿಗೆ ಭಿನ್ನವಾದ ಫೀಲ್ ಕೊಟ್ಟಿವೆ. ಹಾಗಾಗಿ ಈ ಸಿನೆಮಾ ಕುತೂಹಲ ಕೆರಳಿಸಿದೆ. ಜೊತೆಗೆ ಈ ಸಿನೆಮಾವು, ಸಿನೆಮಾದ ವಿಭಿನ್ನದೃಷ್ಟಿ ಕೋನದ ಪರಿಚಯವನ್ನ ಪ್ರೇಕ್ಷಕನಿಗೆ ಮಾಡಿಕೊಡಬಹುದಾ ಎಂಬ ಪ್ರಶ್ನೆಯೊಂದನ್ನು ಮುಂದಿಟ್ಟಿದೆ.
ಅಂದಹಾಗೆ ಈ ಸಿನೆಮಾದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ಹರಿಪ್ರಿಯ ‘ ಪದ್ಮಶ್ರೀ’ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಇಂದು ಈ ‘ಪದ್ಮಶ್ರೀ’ ಪಾತ್ರ ಪರಿಚಯದ ಟೀಸರ್ ಬಿಡುಗಡೆಗೊಂಡಿದೆ. ಟೀಸರ್ ನೋಡಿ..
ಇನ್ನುಳಿದಂತೆ ಈ ಸಿನೆಮಾದ ಪಾತ್ರವೊಂದರಲ್ಲಿ ಅಭಿನಯಿಸಿರುವ ನಟಿ,ಬರಹಗಾರ್ತಿ,ನಿರ್ದೇಶಕಿ ಚೈತ್ರ ಕೋಟೂರ್ ಅವರು ಸಂಭಾಷಣೆ ಒದಗಿಸಿದ್ದಾರೆ. ಕತೆಗಾರ ವಿಕ್ರಂ ಹತ್ವಾರ್ ಕೂಡ ಸಿನೆಮಾ ತಂಡದಲ್ಲಿದ್ದಾರೆ. ಹಾಗೆಯೇ ಸ್ನೇಹಾ ಟಾಕೀಸ್, ಸತೀಶ್ ಪಿಚ್ಚರ್ ಹೌಸ್ ನ ಸಹಯೋಗದೊಂದಿಗೆ ಮೂಡಿಬಂದಿರುವ ಈ ಸಿನೆಮಾ ಸದ್ಯದಲ್ಲೇ ಪರದೆ ಮೇಲೆ ಅರಳಲಿದೆ. ಈ ಸಿನೆಮಾಗೆ ಪ್ರೇಕ್ಷಕ ಪ್ರಭುವಿನ ತನು-ಮನ-ಧನವಿರಲಿ. ಸೂಜಿದಾರ ಮಿಲನ ಮಹೋತ್ಸವ ಕಾಣಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401