ದಿನದ ಸುದ್ದಿ
ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಮನೇಕಾ ಗಾಂಧಿ ನೇಮಕ
ಸುದ್ದಿದಿನ, ನವದೆಹಲಿ : ನಿನ್ನೆ ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲೇ ಒಟ್ಟು 57 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ರು. ಆದ್ರೆ, ಬಿಜೆಪಿಯ ಹಿರಿಯ ಸಂಸದೆ, ಮನೇಕಾ ಗಾಂಧಿಯನ್ನ ಮಾತ್ರ ಸಚಿವರ ಪಟ್ಟಿಯಿಂದ ಕೈಬಿಡಲಾಗಿದೆ. ಇದಕ್ಕೆ ಕಾರಣ 62 ವರ್ಷದ ಮೇನಕಾ ಗಾಂಧಿ ಈ ಬಾರಿ ಮೊದಲ ಸಂಸತ್ ಅಧಿವೇಶನದಲ್ಲಿ ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಸಾಮಾನ್ಯವಾಗಿ ಅತೀ ಹೆಚ್ಚು ಬಾರಿ ಯಾರು ಲೋಕಸಭೆಗೆ ಆಯ್ಕೆಯಾಗಿ ಬರ್ತಾರೋ ಅಂಥ ಹಿರಿಯ ಸಂಸದರನ್ನ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗುತ್ತದೆ. ಈ ಬಾರಿ ಬಿಜೆಪಿಯ ಸಂತೋಷ್ ಗಂಗ್ವಾರ್ ಹಾಗೂ ಮನೇಕಾ ಗಾಂಧಿ ಇಬ್ಬರೂ ಅತ್ಯಂತ ಹಿರಿಯ ಸಂಸದರಾಗಿದ್ದರು.
ಆದ್ರೆ, ಮೋದಿ ಸಚಿವ ಸಂಪುಟದಲ್ಲಿ ಸಂತೋಷ್ ಗಂಗ್ವಾರ್ಗೆ ಸ್ಥಾನ ಸಿಕ್ಕಿದೆ. ಈ ಹಿನ್ನೆಯಲ್ಲಿ ಮನೇಕಾ ಗಾಂಧಿ ಹಂಗಾಮಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. 17ನೇ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದವರೆಲ್ಲರಿಗೂ ಪ್ರಮಾಣ ವಚನವನ್ನ ಮನೇಕಾ ಗಾಂಧಿ ಬೋಧಿಸಲಿದ್ದಾರೆ. ಅಲ್ಲದೆ, ಅವರ ಅಧ್ಯಕ್ಷತೆಯಲ್ಲೇ ಹೊಸ ಸ್ಪೀಕರ್ ಆಯ್ಕೆ ಕೂಡ ನಡೆಯಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243