ರಾಜಕೀಯ
ಗೈರಾದ ಸಚಿವರಿಗೆ ಸ್ಪೀಕರ್ ರಮೇಶ್ ಕುಮಾರ್ ವಾರ್ನಿಂಗ್ !
ಸುದ್ದಿದಿನ ಡೆಸ್ಕ್: ವಿಧಾನಸಭೆ ಅಧಿವೇಶನಕ್ಕೆ ಗೈರು ಹಾಜರಾದ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಏಳು ಸಚಿವರಿಗೆ ಸ್ಪೀಕರ್ ರಮೇಶ್ ಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸದನದ ನಿಮಯದಂತೆ 13 ಮಂದಿ ಸಚಿವರು ಹಾಜರು ಇರಬೇಕು. ಆದರೆ ಆರು ಮಂದಿ ಮಾತ್ರ ಇದ್ದಾರೆ. ಇದು ಸರಿಯಾದ ನಡೆಯಲ್ಲ. ನಾನು ಇದನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಖಾರವಾಗಿ ಹೇಳಿದರು.
ನಂತರ ಸದಸ್ಯರೊಬ್ಬರು ಮಧ್ಯ ಪ್ರವೇಶಿಸಿ, ಸಚಿವ ಡಿ.ಕೆ.ಶಿವಕುಮಾರ್ ಅವರು ತುಮಕೂರು ನಡೆಯುತ್ತಿರುವ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಅವರು ಸದನಕ್ಕೆ ಮಾಹಿತಿ ನೀಡ ಹೋಗಬೇಕಿತ್ತು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್, ಹೌದು ನನ್ನ ಅನುಮತಿ ಪಡೆದು ಸದನಕ್ಕೆ ರಜೆ ಹಾಕಬೇಕು. ಇದೇ ಪ್ರವೃತ್ತಿ ಮುಂದುವರಿದರೆ ಸಹಿಸುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು.