ರಾಜಕೀಯ
ಮೋದಿ ಪರ ಸ್ಪೀಕರ್ ಬ್ಯಾಟಿಂಗ್; ಏಕ್ ದೇಶ್ ಏಕ್ ಚುನಾವಣೆಗೆ ಸಹಮತ
ಸುದ್ದಿದಿನ ದೆಹಲಿ: ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸವರ ಬ್ಯಾಟಿಂಗ್ ಮಾಡಿದ್ದು, ಪ್ರಧಾನಿ ಮೋದಿ ಅವರ ದೇಶದಲ್ಲಿ ಏಕಕಾಲದಲ್ಲಿ ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆಗಳ ಪರಿಕಲ್ಪನೆಯನ್ನು ಬೆಂಬಲಿಸಿದ್ದಾರೆ. ಕಾಮನ್ ವೆಲ್ತ್ ಅಸೋಸಿಯೇಷನ್ ರೀಜನ್- IV ಸಮಾವೇಶದಲ್ಲಿ ಮಾತನಾಡಿ, ನಮ್ಮ ಕಾಳಜಿಯನ್ನು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಹೇಳುತ್ತೇವೆ ಹೊರತು ನಾವು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“ಭಾರತವು ಮೊದಲೇ ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ಏಕಕಾಲಿಕ ಚುನಾವಣೆಗಳ ವ್ಯವಸ್ಥೆಯನ್ನು ಅನುಸರಿಸಿದೆ. ವಿವಿಧ ಹಂತಗಳಲ್ಲಿ ಚುನಾವಣೆ ನಡೆಸುವುದು ಅನೇಕ ಸಮಸ್ಯೆಗಳ ಸೃಷ್ಟಿ ಕಾರಣವಾಗುತ್ತೆ. ಪ್ರಧಾನಿ ನರೇಂದ್ರ ಮೋದಿ ಅವರ ಏಕಕಾಲದಲ್ಲೇ ಚುನಾವಣೆ ನಡೆಸುವುದು ಸೂಕ್ತ, ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು. ಹೆಚ್ಚು ಖರ್ಚು ಮಾಡಲಾಗುತ್ತಿದ್ದ ಹಣ, ಸಮಯ ಉಳಿತಾಯವಾಗುತ್ತದೆ. ಸಂವಿಧಾನಾತ್ಮಕ ಅಂಶಗಳನ್ನು ಒಳಗೊಂಡಂತೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆಯ ನಂತರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಹಾಜನ್ ಹೇಳಿದರು.
“ಒಂದು ರಾಷ್ಟ್ರ, ಒಂದು ಚುನಾವಣೆ” ಎಂಬ ಕಲ್ಪನೆಯು ಹಣ ಮತ್ತು ಸಮಯವನ್ನು ನಿಸ್ಸಂದೇಹವಾಗಿ ಉಳಿಸಲಿದೆ. ಚುನಾವಣೆಗಳಿಗಾಗಿ ಭದ್ರತಾ ಪಡೆಯನ್ನು ನಿಯೋಜನೆ ಮಾಎಉವುದನ್ನು ತಪ್ಪಿಸಬಹುದು ಎಂದು ಹೇಳಿದರು. ಹರಿಯಾಣ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ, ಗುಜರಾತ್‌ನ ವಿಧಾನ ಸಭೆ ಸ್ಪೀಕರ್ ಗಳು, ಡೆಪ್ಯುಟಿ ಸ್ಪೀಕರ್ ಗಳು ಮತ್ತು ಶಾಸಕರು ಹಾಜರಿದ್ದರು.