ದಿನದ ಸುದ್ದಿ
ಮೊಬೈಲಿನಲ್ಲಿ ಮಾತನಾಡುತ್ತಲೇ ಬಾವಿಗೆ ಬಿದ್ದು ಸತ್ತ
ಸುದ್ದಿದಿನ ಡೆಸ್ಕ್: ಮೊಬೈಲ್ ಒಂದಲ್ಲ ಒಂದು ಅವಾಂತರ ಸರ್ಷ್ಟಿಸುತ್ತಿದೆ. ಮೊಬೈಲ್ ತನ್ನ ಲೋಕಕ್ಕೆ ಸೆಳೆದುಕೊಂಡ ಪರಿಣಾಮ ತಮ್ಮ ಮನುಷ್ಯ ಆಸ್ತಿತ್ವ ಕಳೆದುಕೊಳ್ಳುತ್ತಿದ್ದಾನೆ. ಮೊಬೈಲ್ ಹುಚ್ಚು ಇದ್ದರೆ ವಿನಾಶ ಖಚಿತ ಎಂಬುದಕ್ಕೆ ಪಕ್ಕಾ ಉದಾರಣೆಯೊಂದು ಇಲ್ಲಿದೆ ನೋಡಿ.
ತಮಿಳುನಾಡಿನ “ತಿರುಮುಲ್ಲಾಯಿಯಾಯಲ್ಲಿನ ಇಂದಿರಾ ನಗರ ನಿವಾಸಿ ಮಣಿಕಾಂಡನ್ (32) ಮೊಬೈಲಿನಲ್ಲಿ ಮಾತನಾಡುತ್ತಲೇ ರಾತ್ರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಈತ ರಾತ್ರಿ ಊಟ ಮುಗಿಸಿಕೊಂಡ ನಂತ್ರ ಮನೆಯ ಹಿಂಭಾಗದಲ್ಲಿದ್ದ ಬಾವಿ ಕಟ್ಟೆಯ ಮೇಲೆ ಮೊಬೈಲಿನಲ್ಲಿ ಮಾತನಾಡುತ್ತ ಕುಳಿತು ಕೊಂಡಿದ್ದಾನೆ. ಹಾಗೆ ಮಾತನಾಡುತ್ತ ಬಾವಿಗೆ ಬಿದ್ದಿದ್ದಾನೆ.