ದಿನದ ಸುದ್ದಿ
ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ : ಶಾಸಕ ಬಿ.ದೇವೇಂದ್ರಪ್ಪ
- ವರದಿ : ಮಹಾಲಿಂಗಪ್ಪ ಜೆ ಎಚ್ ಎಮ್ ಹೊಳೆ
ಸುದ್ದಿದಿನ, ಜಗಳೂರು : ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.
ಪಟ್ಟಣದ ಹಳೇಬಸ್ ನಿಲ್ದಾಣದ ಬಳಿ ಅಟಲ್ ಭೂಜಲಯೋಜನೆ ಕಲಾ ತಂಡದ ಜನಜಾಗೃತಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂತರ್ಜಲ ಹೆಚ್ಚಳಕ್ಕೆ ಅಟಲ್ ಭೂಜಲ ಯೋಜನೆ ಸಹಕಾರಿಯಾಗಲಿದೆ.ಮಳೆನೀರನ್ನು ಸಂಗ್ರಹಣೆಮಾಡಿ ಮಿತವಾಗಿ ಬಳಕೆಮಾಡಬೇಕು. ತಾಲೂಕು ಕಳೆದ ವರ್ಷ ಅತಿವೃಷ್ಠಿಗೆ ತುತ್ತಾಗಿ ಹಳ್ಳಕೊಳ್ಳಗಳು ಭರ್ತಿಯಾಗಿ ಬೆಳೆನಾಶವಾಗಿದ್ದವು. ಪ್ರಸಕ್ತಸಾಲಿನಲ್ಲಿ ಸರಿಯಾಗಿ ಮಳೆಬೀಳದೆ ಮುಂಗಾರು ಬೆಳೆಗಳು ಬಾಡುತ್ತಿವೆ.ರೈತರು ಸಂಕಷ್ಟದಲ್ಲಿದ್ದಾರೆ.ಜನಜಾನುವಾರುಗಳು ಕುಡಿಯುವ ನೀರಿಗೂ ಆಹಾಕಾರ ಉಂಟಾಗುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಕೃತಿಯಲ್ಲಿ ನೀರು,ಗಾಳಿ,ಬೆಳಕು,ದೇವರು ಕೊಟ್ಟ ಬಿಕ್ಷೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಆಮ್ಲಜನಕಕ್ಕೂ ಪರದಾಡುವಾಗ ಪರಿಸರದ ಮಹತ್ವ ಅರಿವಾಗಿದೆ.ಪ್ರಕೃತಿ ವಿನಾಶ ಜೀವಸಂಕುಲಕ್ಕೆ ಆಪತ್ತು.ಪ್ರಕೃತಿ ಉಳಿವಿಗಾಗಿ ಸಂಕಲ್ಪಮಾಡಬೇಕು ಎಂದರು.
ಕಲಾತಂಡದಿಂದ ನೀರಿನ ಮಿತಬಳಕೆ ಕುರಿತು ಜನ ಜಾಗೃತಿ ಮೂಡಿಸಲಾಗುತ್ತಿದೆ.ಸದುಪಯೋಗಪಡೆದುಕೊಳ್ಳಬೇಕು.ಸರಕಾರದ ಯೋಜನೆಗಳು ಸಮಾಜಕ್ಕೆ ಪೂರಕವಾಗಬೇಕು ಎಂದರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ,ಡಿಪಿಎಂ ನೋಡೆಲ್ ಅಧಿಕಾರಿ ಆರ್.ಬಸವರಾಜ್,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ,ಶಕೀಲ್ ಅಹಮ್ಮದ್,ಮುಖಂಡರಾದ ಅಹಮ್ಮದ್ ಅಲಿ,ಓಮಣ್ಣ, ಶಂಭುಲಿಂಗಪ್ಪ, ಮಾಳಮ್ಮನಹಳ್ಳಿ ವೆಂಕಟೇಶ,ಸಮಾಜಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ,ಕೃಷಿ ಇಲಾಖೆ ಎಡಿ ಮಿಥುನ್ ಕಿಮಾವತ್,ನೀರಾವರಿ ಇಲಾಖೆಯ ಚಂದ್ರಗೌಡ,ಶ್ವೇತಾ ಕೆ.ಎಸ್.,ಅರ್ಪಿತ ಎಸ್ ಆರ್,ಯಶ್ವಂತ್,ಮಂಜುನಾಥ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243