ದಿನದ ಸುದ್ದಿ

ಮಾ. 28 ರಂದು ಪ್ರಿಯದರ್ಶಿನಿ ಕರ್ನಾಟಕ ಮಹಿಳಾ ಕಾಂಗ್ರೆಸ್ ನಿಂದ “ಭಾಷಣ ಮತ್ತು ಪ್ರಬಂಧ ಸ್ಪರ್ಧೆ”

Published

on

ಸುದ್ದಿದಿನ, ಬೆಂಗಳೂರು : 2021 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಯುವ ನಾಯಕಿಯರ ಅನ್ವೇಷಣೆ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯನ್ನು ಮಾರ್ಚ್ 28ರಂದು ಭಾನುವಾರದಂದು ಪ್ರಿಯದರ್ಶಿನಿ ಕರ್ನಾಟಕ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದೆ‌‌ ಎಂದು ಪ್ರಿಯದರ್ಶಿನಿಯ ರಾಜ್ಯ ಸಂಚಾಲಕಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವತಿಯರು ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸುವ ಅವಕಾಶವನ್ನು ಒದಗಿಸುವ ಉದ್ದೇಶದಿಂದ ಪ್ರಿಯದರ್ಶಿನಿ ಕರ್ನಾಟಕವು 16 ರಿಂದ 35 ವರ್ಷದೊಳಗಿನ ಯುವತಿಯರಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಪ್ಯಾಲೇಸ್ ರೋಡ್, ರೇಸ್ ಕೋರ್ಸ್, ಬೆಂಗಳೂರು ಇಲ್ಲಿ ಸ್ಪರ್ಧೆ ನಡೆಸಲಾಗುತ್ತದೆ. ಸ್ಪರ್ಧೆಯ ವಿವರಗಳು ಪೋಸ್ಟರ್‌ನಲ್ಲಿದ್ದು,‌ಆಸಕ್ತ ಯುವತಿಯರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | ಇನ್ನೂ 19 ಸಿಡಿ ಇದೆಯಂತೆ, ಮಾತನಾಡುವಾಗ ನಾಲಗೆ ಹಿಡಿತದಲ್ಲಿರಲಿ : ನಳಿನ್ ಕುಮಾರ್ ಕಟೀಲ್ ಗೆ ಸಿದ್ದರಾಮಯ್ಯ ಎಚ್ಚರಿಕೆ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version